Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಈ ಹುಡುಗಿಯರೇ ಹೀಗೆ

ಬೆಟ್ಟದ ಬದಿಯಿಂದ
ಮುಂಜಾನೆಯ ರವಿ ಇಣುಕಿದಂತೆ
ಕಿಟಕಿ ಹಿಂದಿನ ಕಂಗಳು,
ಕಂಡೂ ಕಾಣದ ಮುಂಗುರುಳು
ಗಲಗಲ ಬಳೆಯ ತರಂಗ
ಕಿಲಕಿಲ ನಗುವಿನಂತರಂಗ,

ಎದುರು ಬರಲಾರರು ಚೆಲುವೆಯರು
ಬಂದರೂ ಬಹು ಲಾಸ್ಯ ಲಜ್ಜೆ
ಇಡುತಲಿ ಒಂದೊಂದೇ ಹೆಜ್ಜೆ
ಮುಗಿಲಿಂದ ಬರಗಾಲದಿ ಮಳೆ ಹನಿ
ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ !

ಕಿರು ಹನತೆ ಉರಿಯಂತೆ ತುಟಿ ರಂಗು
ಪತಂಗ ಹಾರಿದಂತೆ ತೆಳು ಸೆರಗು
ಕಾವ್ಯದೊಡತಿಯರು,
ಮೌನವೇ ಮಾತು

ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ
ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ
ಒಮ್ಮೆ ಧಾರಾಳ ದಮಯಂತಿ
ಮಗದೊಮ್ಮೆ ಮುನಿದ ಮಗುವಂತೆ
ಅಲ್ಲಿ ಪ್ರೇಮ ಪ್ರೀತಿಯನ್ನರಸುವ
ಹುಡುಗನ ನಿರಂತರ ಬೇಟೆ !
ಅರಿವಾಗುವ ಮುನ್ನವೇ ಮಾನಸಿಕ
ಪತ್ನಿಯಾಗಿರುತ್ತಾಳೆ,
ಛೇಧಿಸಿ ಹೃದಯ ಕೋಟೆ.

- ಶ್ರೀಗೋ.

27 Sep 2014, 05:09 pm

ನನ್ನಪ್ಪ

ನಮ್ಮಪ್ಪ ಉಳುಮೆಗಾರ
ಕಂಡೋರ ಹೊಲದಲ್ಲಿ ದುಡಿಯೋ
ದುಡಿಮೆಗಾರ.
ತನ್ದು ಅಂತ ನಾಕು ಗದ್ದೆ ಮಾಡಿ
ತಾನೂ ಒಬ್ಬ ರೈತ ತೋರ್ಸಿದ
ಛಲಗಾರ.
ಕಾಡಲ್ಲಿ ಮನೆ ಕಟ್ಟಿ
ಕಂಡೋರ ಮನೆಯ ಕೂಲಿ ಮಾಡಿ
ಕೈಲಾದ ನಾಕು ಕಾಸು ದುಡಿದು
ನಮ್ಮನ್ನ ಸಾಕಿ ಸಲುಹಿದಾತ
ಸಂಜೆ ಕುಡಿತ
ಅದಕಿಲ್ಲ ಹಿಡಿತ
ಆದ್ರೂ ಅವಂದು ಭಾರಿ ದುಡಿತ
ಏನೇ ಕಷ್ಟ ಬಂದ್ರೂ ಸಹ
ಎದೆಗುಂದದೆ
ಕಂಬನಿ ಒದ್ದು,
ಕಂಬಳಿ ಹೊದ್ದು
ಮಳೆ ಗುಡುಗೆನ್ನದೆ
ಚಳಿ ನಡುಗೆನ್ನದೆ
ದುಡಿ ದುಡಿದು
ಬೇರೆಯವ್ರ ಕಣಜವ ತುಂಬಿದಾತ.
ಆಳು ಹಾಕಿ ಗುತ್ತಿಗೆ ಹಿಡಿದು
ತಾನೂ ದನಿಕನಾಗುವ
ಕನಸು ಕಂಡಾತ.
ವರ್ಷಗಟ್ಲೆ ಗುತ್ತಿಗೆ ಮಾಡಿ
ಲಾಭ ಬರದೆ ಆಕಾಶ ನೋಡಿ
ಕಣ್ ಕಣ್ ಬಿಟ್ಟಾತ.
ಅಪ್ಪಾ...
ನೀನ್ಯಾಕೆ ಬಡವನಾಗಿ ಹುಟ್ಟಿದೆ?

- ಶ್ರೀಗೋ.

25 Sep 2014, 01:26 am

ಸಹೋದರ

ಬಿಸಿಲಿನ ಕೆಳಗೆ
ನಿಂತು
ನಗು ಮುಖ
ಬೀರುವ
ಸಹೋದರನನ್ನು
ಕಾಣುವಾಗ

ಬೆಳಗಿನಾಕಾಶದಲಿ
ಸೂರ್ಯ
ಮೂಡುವಾಗ
ಮರೆಯಾದ
ಚಂದ್ರನಂತೆ
ಅಡಕವಾದ

ತಾಳ್ಮೆ
ತ್ಯಾಗ
ಭರವಸೆ
ನೆನಪಾಯಿತು.

- ಮುಸ್ತಫಾ ಇರುವೈಲು

21 Sep 2014, 04:40 pm

ಸುಳ್ಳಿನ ಕಂತೆ

ನಿದಿರೆ ಮಾಡದವನು ಕನಸು ಕಂಡಂತೆ
ಕೆಲಸ ಮಾಡದವನು ದುಡ್ಡಿಗಾಸೆ ಪಟ್ಟಂತೆ
ನೋವರಿಯದ ಜನಪ್ರತಿನಿಧಿಗಳು ಬಿದ್ದ ಮರದಂತೆ
ಬದಲಾವಣೆಯ ನಿರೀಕ್ಷೆ ಬಲುದೊಡ್ಡ ಸುಳ್ಳಿನ ಕಂತೆ

- ಮುಸ್ತಫಾ ಇರುವೈಲು

19 Sep 2014, 10:45 am

ಯುದ್ಧ

ಅಂದು
ರಾಜಕಾರಣಿ
ಎಡವಿ ಬಿದ್ದ
ಕಾರಣಕ್ಕೆ
ಇಂದು
ಕಾಶ್ಮೀರ ಗಡಿಯಲ್ಲಿ
ನಿತ್ಯವೂ ಯುದ್ಧ !

- ಶ್ರೀಗೋ.

19 Sep 2014, 01:58 am