Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

//*ಸಾಧನೆ*//

ಸೋಲಿನಿಂದ ಗೆಲುವ
ಸಾಧಿಸಿ ಗೆದ್ದುಕೊಳ್ಳಬೇಕು.
ಕಡಲಿನಿಂದ ನದಿಯ
ಕಡೆದು ಕದ್ದುಕೊಳ್ಳಬೇಕು. . !

ಗೆಳಯ ನಿನ್ನ ಆಸೆ ಆಕಾಂಕ್ಪೆಗಳಿಗೆ,
ಸಮಯ ನಿಯಮಗಳು
ತಂತಾನೇ ತಿದ್ದಿಕೊಳ್ಳಬೇಕು. . . .

//ಶ್ರೀವತ್ಸ//

- ಶ್ರೀವತ್ಸ

21 Nov 2014, 11:14 am

*ಹೊಟ್ಟೆ ಪಾಡು*

ಒಂದೆರಡು ಮೀನ ಹಿಡಿಯಲು
ಗಾಳ ಹಾಕಿ ಕುಂತಿರುವೆ,
ಬೃಹತ್ ಬಲೆಯನಲ್ಲ. .

ದೈನಂದಿನ ಹೊಟ್ಟೆ ಪಾಡಿಗೆ
ಜೀವ ಕಳೆಯುತ್ತೇನೆ . .
ಮೀನಿನ ವ್ಯಾಪಾರಕಲ್ಲ , .
/ಶ್ರೀವತ್ಸ//#

- ಶ್ರೀವತ್ಸ

21 Nov 2014, 09:11 am

ಸಪ್ನ ಸುಂದರಿ

ಬಾವನೆಗಳ ಸಂಗಮಕ್ಕೆ ಅತೊರಿಯುತ್ತಿದೆ ನನ್ನ ಮನಸ್ಸು
ಇನ್ನು ಕರುಣೆ ಬಾರದೆ ? ಏಕೆ ಇಂಥ ಮುನಿಸು
ಕಮರಿಯೋದ ಕನಸೊಂದು ಮತ್ತೆ ಚಿಗುರುತ್ಹಿದೆ ನಿನ್ನ ಒಲುಮಿಯಿಂದ
ಬಾವಸಂಗಮದ ಚಿಲುಮೆ ಮತ್ತೆ ನಿನ್ನಿಂದ
ಸಪ್ನ ಸುಂದರಿಯ ಕನಸು ನನಸಾಗಲಿ ಇಂದು ನಿನ್ನಿಂದ ..........
:-ಸಂತೋಷ್

- santhosh

20 Nov 2014, 06:36 am

ನೀ ನನ್ನ ಜೀವಾ

ನೀ ನನ್ನ ಜೀವಾ ಓ ಪ್ರಿಯತಮೆ
ನಿನಗಾಗಿ ನಾನು ಓ ಪ್ರಿಯತಮೆ
ಪ್ರೀತಿಯ ಪಾಠಾ ನೀ ಕಲಿಸಿದೆ
ಬಾಳುವದು ಹೆಗೆ ನೀ ತಿಳಿಸಿದೆ
ಪ್ರಿಯತಮೆ ಪ್ರಿಯತಮೆ
ನಿನ್ನಗಲಿ ಅರೆಕ್ಷಣವು ಬದುಕಿರೆನು ನಾ
ಅರೆ ಬರೆ ತಿರುಗುತ್ತಿದ್ದೆ ಮರಳುಗಾಡಿನಲ್ಲಿ
ನೀ ಬಂದೆ ಎನಗೆ ಓಯಾಸಿಸುನಂತೆ
ಆ ಕುಚೇಲನಿಗೆ ಅಷ್ಟಲಕ್ಷೀಯಂತೆ
ಘಠ ಘೂರ ದರಿದ್ರನು ಧನಿಕನಾದಂತೆ
ಸಮುದ್ರದ ನಡುವೆ ದಡ ಸೆರಿದಂತೆ
ನೀ ನನ್ನ ಜೀವಾ ಓ ಪ್ರಿಯತಮೆ
ನೀನಗಾಗಿ ನಾನು ಓ ಪ್ರಿಯತಮೆ
ಬಿಳೆ ಹಾಳೆ ಜೀವಕೆ ಪೆನ್ನಾದೆ ನಿ
ತಪ್ಪು ಮಾಡಿದಾಗ ತಿದ್ದಿ ಹೆಳಿದೆ ನೀ
ಕೂಪಗೂಂಡ ತಕ್ಷಣ ತುಂಟ ನಗೇ ಬಿರಿದ ನೀ
ನಾ ಮುನಿಸಿಕೂಂಡರು ಪ್ರಿತಿಯ ಮಾತನಾಡಿದೆ ನೀ
ನೀ ನನ್ನಾ ಜೀವಾ ಓ ಪ್ರಿಯತಮೆ
ನಿನಗಾಗಿ ನಾನು ಓ ಪ್ರಿಯತಮೆ

- ರೊಹಿತ್

19 Nov 2014, 06:16 pm

ಅಮ್ಮ

ತಾಯಿ ಪ್ರೀತಿ ಸಿಗದ ಮಕ್ಕಳ್ಳು " ಸಮುದ್ರದಲ್ಲಿ ಈಜುವ ಮೀನಿನಂತೆ . .... ಹೋರಗಡೆ ಬಂದರೆ ಸಾಕು .ನನ್ನ ಪ್ರಾಣ ಆ
ದೇವರ ಕೈಯಲ್ಲಿ. ದೇಹ ಮಾತ್ರ ಮೀನುಗಾರನಾ ಹೊಟ್ಟೆಯಲ್ಲಿ......
ತಂದೆ ತಾಯಿಯರನ್ನ ಪ್ರೀತಿಸಿ. ಅವರ ಸೇವೆ ಮಾಡದಿದ್ದರು ಸರಿ. ಅವರ ಮನಸ್ಸನ್ ಮಾತ್ರ ನೋಯಿಸ ಬೇಡಿ...... ಆ ಮನಸ್ಸು ಎಳೆ ತೆಂಗಿನಕಾಯಿ ನೀರಿನಂತೆ......

- ಸದಾನಂದ ಈಶ್ವರ ಬಡಿಗೇರ

19 Nov 2014, 05:22 pm

ಒಡೆದ ಮನಸ್ಸು


ನೋವುಗಳು ತುಂಬಿರಲು ಮನಸ್ಸಿನಲ್ಲಿ
ಕಾಡುತ್ತಿವೆ ಅವು ನನ್ನ ಕನಸ್ಸಿನಲ್ಲಿ

ಬತ್ತಿಹೋಗಿವೆ ಕಣ್ನಿರಿನ ತೂಕ
ಬರಿದಾಗಿವೆ ಬಾಳಿನ ಲೋಕ

ಬಾಳ ಬೇಕೆಂದಿದ್ದೆ ಹಚ್ಚಹಸುರಾಗಿ
ಅದರೆ ಈಗ ಒಡೆದು ಹೋಗಿದೆ ಮನಸ್ಸು ನುಚ್ಚುನೂರಾಗಿ

ರಚನೆ:
ಗಣನಾಥ

- ಗಣನಾಥ

19 Nov 2014, 12:02 pm

ಹೋಗು... ಹೋಗೆಲೆ...

ಹೋಗು ಹೋಗು ಹೋಗು

ನಾಮೆಚ್ಚಿದ ಹುಡುಗಿ ನೀನಲ್ಲ ಹೋಗು
ನಾಇಚ್ಚಿಸಿದ ಹುಡುಗಿ ನೀನಲ್ಲ ಹೋಗು
ಕಣ್ಮುಂದೆ ಕಾಣಬೇಡ, ಕನಸಿನಲ್ಲಿ ಬಾರಬೇಡ
ಹೋಗು ಹೋಗು ಹೋಗು

ನೀ ನನಗೆ ಗೊತ್ತಿಲ್ಲ ಹೋಗು
ನಿನ್ನನ್ನು ಕಂಡಿಲ್ಲ ಹೋಗು
ನನ್ನನಂಬಿಸಿ ಮೋಸಮಾಡಿದವಳೆ....
ಹೋಗು ಹೋಗು ಹೋಗು

ಮತ್ತೆಂದು ಕಾಣಬೇಡ ಹೋಗು
ಕಂಡರು ಮಾತನಾಡಿಸಬೇಡ ಹೋಗು
ಪ್ರೀತಿಯ ವಿಷವನ್ನು ಉಣಿಸಿದವಳೆ....
ಹೋಗು ಹೋಗು ಹೋಗು

ಮನಸ್ಸಿನಿಂದ ದೂರಹೋಗು
ಹೃದಯದಿಂದ ದೂರಹೋಗು
ನನ್ನುಸಿರನ್ನು ನಿಲ್ಲಿಸಿ ನೀ ಕಾಣದಂತೆ....
ಹೋಗು ಹೋಗು ಹೋಗು.

- ಚೇತನ್ ಬಿ ಸಿ

18 Nov 2014, 04:06 pm

ನಾ ಕಂಡ ಚಂದ್ರ

ನನ್ನನ್ನು ನಾ ತಿಳಿದಿದ್ದೆ ಹುಣ್ಣಿಮೆಯ ಚಂದ್ರನೆಂದು.ಜಭದಿಂದ ತಿರುಗುತಿದ್ದೆ ಜಗತ್ತಿನ ಬೇಳಕು ನನ್ನದೆಂದು.ಗಹಗಹಿಸಿ ನಗುದಿಂದ ಹೇಳುತಿದ್ದೆ ನಾನಿಲ್ಲದೆ ಏನು ಇಲ್ಲಾ ಎಂದು.ಕೂನೆಗು ಆ ದೇವರಿಗು ಹೂಟ್ಟೇ ಉರಿದು ನಾ ಕಟ್ಟಿದ ಸುಂದರ ಸರೂವರದಲ್ಲಿ ಎಸೆದಾ ಕಲ್ಲೂಂದು.ಆಗ ತಿಳಿಯಿತು ನನಗೆ .ನಾ ಚಂದ್ರನಲ್ಲಾ
ಆ ಚಂದ್ರನಿಂದ ಬಿದ್ದ ನಿರೂಳಗಿನ ಪ್ರತಿಬಿಂಬ ಎಂದು ನಾ ಪ್ರತಿಬಿಂಬ ಎಂದು

ಆರ. ದೂಡ್ಡ ಸಗರ

- ರೊಹಿತ್

18 Nov 2014, 02:45 pm

ಅವಳೆಲ್ಲಿ ?

ನಾನು ಕವನವ ಬಿಳಿ ಹಾಳೆಯ ಮೇಲೆ ನೀಲಿ ಶಾಯಿಯಿಂದ ಬರೆದು ಅವಳಿಗೆ ಕೊಟ್ಟೆ.....
ಅವಳು ನನ್ನ ನೋಡಿ, ಚೂರು ಚೂರು ಮಾಡಿ ಮೋರಿಗೆಸೆದಳು.
ಅವನು ಕವನವ ಬಿಳಿ ಹಾಳೆಯ ಮೇಲೆ
ಕೆಂಪು ಶಾಯಿಯಿಂದ ಬರೆದು ಅವಳಿಗೆ ಕೊಟ್ಟನು ....
ಅವಳು ಆತನ ನೋಡದೆ , ಅವನ ಹಿಂದೆ ಹೋದಳು.
ಅದಕ್ಕೆ
ಇಂದು ನಾನು ಇಲ್ಲಿ , ಅವಳು ಅಲ್ಲಿ !

- ಚೇತನ್ ಬಿ ಸಿ

17 Nov 2014, 04:59 pm

ಚೆಲುವೆಗೆ ಕಿವಿಮಾತು


ನೀ ಚೆಲುವೆಯೆಂದು ಬಿಗಬೇಡ
ಚೆಲುವಿನಿಂದ ಅಲೆಯಲಾಗುವುದಿಲ್ಲ ಭಾವನೆಗಳ
ಅರಿತರೆ ನೀ ಚೆಲುವಿನಡಿಯಲ್ಲಿರುವ ಭಾವನೆಗಳ
ಒಳಿತು ನಿನಗೆ ಜೀವನದ ಹಾದಿಯಲ್ಲಿ
ಕುರೂಪಿ ನಾ ನಾಗಿರಬಹುದು
ನನ್ನ ಭಾವನೆ ಕುರೂಪಿಯಲ್ಲ
ನೀ ನನ್ನ ಅರಿಯದಿದ್ದರು ಚಿಂತೆಯಿಲ್ಲ
ನಿನ್ನ ಅರಿತವರ ನೊಯಿಸಬೆಡ

ನೀ ಹೇಳಬಹುದು ನೀನು ಕುರೂಪಿ
ನೀ ನೋಡು ನಿನ್ನ ಮುಖವನ್ನ ಕನ್ನಡಿಯಲ್ಲಿ
ಅಷ್ಟೆ ಸಾಕು ಕನ್ನಡಿಯಂತ ಮನಸ್ಸು ಒಡೆದು ನುಚ್ಚುನೂರಾಗಲು
ಒಡೆದ ಮನಸ್ಸು ಉದುರಿದ ಹೂ
ಮತ್ತೆ ಒಂದಾಗಲು ಸಾಧ್ಯವಿಲ್ಲ

ನೀನು ನಿನ್ನ ಚೆಲುವಿಗಿಂತ ಜೀವನದ ಚೆಲುವನ್ನ ಕಾಪಡಿಕೊ
ನಿನ್ನ ಒಂದು ಮಾತು ನಿನ್ನ ಜೀವನವನ್ನು ರೂಪಿಸಬಹುದು
ಹಾಗೆ ಒಂದು ಮಾತು ನಿನ್ನ ಜೀವನವನ್ನು ಮುಗಿಸಬಹುದು
ಮತ್ತೆ ಮತ್ತೆ ಹೇಳುತ್ತೆನೆ ನಿನಗೆ
ಅರಿಯಬೆಕು ನೀನು ನಿನ್ನ
ಅಳೆಯಬೇಕು ನಿನ್ನ ಜೀವನವನ್ನ

ಚೆಲುವು ನಿನಗಿರಬಹುದು
ನಿನ್ನ ಚೆಲುವೆ ನಿನಗೆ ಮುಳ್ಳಾಗಬಹುದು
ನೀನು ನಿನಗೆ ಮುಳ್ಳಾಗಬೆಡ
ಇತರರ ನೊವಿನ ಮುಳ್ಳನ್ನು ತೆಗೆಯುವ ಮುಳ್ಳಾಗು
ಚೆಲುವೆ ನಿನ್ನ ಜೇನಿನಂತ ಜೀವನ
ಚೆಲುವಾಗಿರಲಿ ಚೆಲುವಾಗಿರಲಿ

ಇಂತಿ ನಿನ್ನ
ಗಣನಾಥ

- ಗಣನಾಥ

17 Nov 2014, 12:35 pm