Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚರ್ಮದ (ಮೋಹ)


!! ಇವತ್ತು ಚರ್ಮ ಹೊಳಿತೈತಿ
ನಾಳೆ ಒಂದಿನ ಕ್ವಳಿತೈತಿ....!!
!! ಎಷ್ಟು ಹಾರೈಕೆ ಮಾಡಿದ್ರೆನು
ಈ ಕಾಂತಿ ಕೊನೆತನಕ ಇರುತೈತೇನು...!!

!! ಚರ್ಮದಾಗ ವರ್ಣಬ್ಯಾರೆ ಐತಿ.
ಕರಗ, ಬೇಳಗ ಅಂತ ಬೇದ ತುಂಬೈತಿ..!!
ಎಷ್ಟು ಬೆಳಗಿದ್ದರೇನು...
ಸುಟ್ಟರೆ ಬೂದಿ ಆಗದೆ ಇರತೈದೇನು?..

@LKG.23
vistar_nudi
!! ಇವತ್ತು ಚರ್ಮ ಹೊಳಿತೈತಿ
ನಾಳೆ ಒಂದಿನ ಕ್ವಳಿತೈತಿ....!!
!! ಎಷ್ಟು ಹಾರೈಕೆ ಮಾಡಿದ್ರೆನು
ಈ ಕಾಂತಿ ಕೊನೆತನಕ ಇರುತೈತೇನು...!!

!! ಚರ್ಮದಾಗ ವರ್ಣಬ್ಯಾರೆ ಐತಿ.
ಕರಗ, ಬೇಳಗ ಅಂತ ಬೇದ ತುಂಬೈತಿ..!!
ಎಷ್ಟು ಬೆಳಗಿದ್ದರೇನು...
ಸುಟ್ಟರೆ ಬೂದಿ ಆಗದೆ ಇರತೈದೇನು?..

@LKG.23
vistar_nudi

- LKG

27 Mar 2024, 07:55 pm

ಮೋಹ (ಚರ್ಮ)

!! ಇವತ್ತು ಚರ್ಮ ಹೊಳಿತೈತಿ
ನಾಳೆ ಒಂದಿನ ಕ್ವಳಿತೈತಿ....!!
!! ಎಷ್ಟು ಹಾರೈಕೆ ಮಾಡಿದ್ರೆನು
ಈ ಕಾಂತಿ ಕೊನೆತನಕ ಇರುತೈತೇನು...!!

!! ಚರ್ಮದಾಗ ವರ್ಣಬ್ಯಾರೆ ಐತಿ.
ಕರಗ, ಬೇಳಗ ಅಂತ ಬೇದ ತುಂಬೈತಿ..!!
ಎಷ್ಟು ಬೆಳಗಿದ್ದರೇನು...
ಸುಟ್ಟರೆ ಬೂದಿ ಆಗದೆ ಇರತೈದೇನು?..

@LKG.23
vistar_nudi

- LKG

27 Mar 2024, 07:45 pm

ನೆನಪುಗಳು.... ಹುಡುಕಾಟ....

ವರುಷಗಳ ನಂತರ ಒಂದು ದಿನ
ಜೀವನದಲ್ಲೇನೋ ಮಹತ್ವವಾದುದನ್ನು ಕಳೆದುಕೊಂಡಿರುವೆ ಅನ್ನಿಸಿದಾಗ
ನನ್ನನ್ನು ಹುಡುಕಬಹುದು
ಹಳೆ ನೆನಪಿನ ಪುಟಗಳನ್ನು ತಿರುವಿ ಹಾಕಬಹುದು
ನನಗೆ ಕರೆಮಾಡಬಹುದು, ಕಾಗದ ಬರೆಯಬಹುದು
ನಾನು ಉತ್ತರಿಸುವುದಿಲ್ಲ ಅಲ್ಲಿ ನಾನಲ್ಲಿರಿವುದಿಲ್ಲ
ಕಾಲ ಸರಿದು ಎಲ್ಲವೂ ಬದಲಾಗಿದೆ ನಾನು ಕೂಡ...

ಆಗ ನನ್ನ ಆಸ್ತಿತ್ವವನ್ನು ತಿಳಿಯಲೆತ್ನಿಸಬಹುದು ಭಾವನಾತ್ಮಕವಾಗಿ ನೆನಪುಗಳನ್ನು ಕೆದಕಬಹುದು
ನೀನು ಪ್ರೀತಿಸುವವರಲ್ಲಿ ನನ್ನನ್ನು ಕಾಣಲು
ಪ್ರಯತ್ನಿಸಿರಬಹುದು ಅವರು ನಿನ್ನನ್ನು ನನ್ನಷ್ಟೇ ಪ್ರೀತಿಸಿರಬಹುದು, ನನ್ನಷ್ಟೇ ನಿನನ್ನು ನಗಿಸಿರಬಹುದು
ಆದರೆ ನಿನಗೆ ತಕ್ಷಣ ಅರ್ಥವಾಗುತ್ತೆ
ಅವರು ನಾನಾಗಲು ಸಾಧ್ಯವಿಲ್ಲ
ಏಕೆಂದರೆ ಅದೊಂದು ವಿಶಿಷ್ಟ ಪ್ರೀತಿ ವಿಶೇಷ ...

ನಾನು ನಿನಗಾಗಿಯೇ ಕಾಯುತಿದ್ದೆ ನನ್ನನ್ನು
ಕಳೆದುಕೊಂಡೆ ನನ್ನ ನೆನಪುಗಳನ್ನು...
ನಿನ್ನ ಉಳಿದ ದಿನಗಳನ್ನು ನನ್ನ ಕುರುಹುಗಳನ್ನ
ಬೇರೆಯವರ ಹೃದಯಗಳಲ್ಲಿ ಪ್ರೀತಿಯಲ್ಲಿ ಹುಡುಕಲು
ಪ್ರಯತ್ನಿಸಬಹುದು ಆದರೆ ನಾನು ಸಿಗುವುದಿಲ್ಲ
ಏಕೆಂದರೆ ಅದೊಂದು..............


















- ಶಶಿಧರ ಹೆಚ್ ಎನ್

15 Mar 2024, 05:39 pm

ಎಚ್ಚರ ತಂಗೆಮ್ಮಾ

ಎಚ್ಚರ ತಂಗೆಮ್ಮಾ

ಎಚ್ಚರ ತಂಗೆಮ್ಮ ಎಚ್ಚರ ಎಚ್ಚರ
ಹುಚ್ಚರ ಜಗದೊಳಗಿರು ಎಚ್ಚರ
ಕಚ್ಚೆ ಕಟ್ಟದ ಜನರಿಂದಿರು ಎಚ್ಚರ
ಮೆತ್ತನೆ ಮಾತುಗಳಿಂದಿರು ಎಚ್ಚರ

ಸೆಂಟು ಬೂಟು ಗಳಿಂದಿರು ಎಚ್ಚರ
ಸೂಟು ಸೋಕಿಗಳಿಂದಿರು ಎಚ್ಚರ
ಬೈಕು ಕಾರು ಗಳಿಂದಿರು ನಿ ಎಚ್ಚರ
ಅವರ ಬಣ್ಣದ ಮಾತಿಂದರು ಎಚ್ಚರ

ಸಾಲ ಸೋಲ ಗಳಿಂದಿರು ನಿ ಎಚ್ಚರ
ಸಂತಾನ ಸಾಕುವುದರಲ್ಲಿರಲಿ ಎಚ್ಚರ
ಹುಚ್ಚು ಮನಸಿಂದಿರು ನೀನು ಎಚ್ಚರ
ಪತಿ ಸೇವೆಯಲ್ಲಿರಲಿ ನಿನಗೆ ಎಚ್ಚರ

ಹೊರಗಡೆಯ ಕೆಲಸದಲ್ಲಿರಲಿ ಎಚ್ಚರ
ಬಾಡಿಗೆ ಅನ್ನಂದಿರಿಂದರಲಿ ಎಚ್ಚರ
ಒಳಗಿರುವ ಮುಸುಕಿಂದಿರು ಎಚ್ಚರ
ಸಮಯ ಸಾದಕರಿಂದಿರು ನಿ ಎಚ್ಚರ


ನಿನ್ನತನವನ್ನೆಲ್ಲ ಬಿಟ್ಟು ಕೊಟ್ಟು ತಂಗಿ
ನಿನಗಾಗಿ ಕಾದಿಹವು ಅದೆಷ್ಟು ಮಂದಿ
ಅಗದಿರು ನೀನು ಮುಂದೆ ಚಿಂದಿ ಚಿಂದಿ
ಲೋಕಪಾಲಕನ ಮುಂದೆ ಬಿಂದು ಎಂದೆ




- Kalmesh Badiger

09 Mar 2024, 06:37 am

ಕವನ ಅಂತರರಾಷ್ಟ್ರೀಯ ಮಹಿಳಾ ದಿನ.



ಪೃಥ್ವಿಯೊಳ್ ಬಂಧಿಸಿದ ಬೇರಂತೆ ಮನೆಯಲ್ಲಿದ್ದ ಹೆಣ್ಣು, 

ಪರತಂತ್ರ ದಾಚೆಯ ಬದುಕನು ಬಯಸಿತವಳ ಕಣ್ಣು.

ತನ್ನವರ ಹಸಿವ ಇಂಗಿಸಿ ಉಪವಾಸ ಇರುವಳು ಅವ್ವ, 

ಕುದಿಯುವ ನೋವಿನೊಳಗೂ ನಮಗೆ ನಗುವುದ ಕಲಿಸಿದ ಜೀವ..

ಜ್ಞಾನಾಸಕ್ತರನ್ನಾಗಿಸಿತು ಮಹಿಳೆಯರಿಗೆ ಮಹನೀಯರ ಪ್ರೋತ್ಸಾಹ, 

ಸಂವಿಧಾನವಿತ್ತ ಶಿಕ್ಷಣದ ಅವಕಾಶ, 

ಮೂಡಿಸಿತು ಸ್ಮೃತಿಯೊಳಗೆ ವಿದ್ಯೆ ಪಡೆಯುವ ಉತ್ಸಾಹ...

ಪಂಜರದ ನೀಲಾಂಗನೆಗೆ ದೊರೆಯಿತು ಜ್ಞಾನ, 

ಗಗನ ಯಾತ್ರಿ ಯಾಗಲು ತಿಳಿಸಿತು ನಮ್ಮ ವಿಜ್ಞಾನ.... 

ಬಾಳೆಗೊನೆ ಬಿರಿಯದಂತೆ ನಿಭಾಯಿಸುವಳೂ 

ಜನನಿ ಸಂಸಾರ, 

ಶಿಕ್ಷಕಿಯಾಗಿ ಕಲಿಸುವಳು ಜಗದ್ರಕ್ಷಕನಾಗೋ ಕಂದನಿಗೆ ಸುಸಂಸ್ಕಾರ..... 

ಹೆಣ್ಣಿರದ ಧರೆಯು ಶೂನ್ಯವಿದ್ದಂತೆ, 

ಮನುಕುಲವ ಸೃಷ್ಟಿಸಿ ಮೆರೆದಿಹಳು ಗಾಂಧಾರೆಯಂತೆ......

ತನ್ನ ಕಾರ್ಯಕ್ಷೇತ್ರದ ಯಶಸ್ಸಿಗೆ ತನ್ಮಯವಾಗುವಳೂ ಹೆಲನ್ ಕೆಲ್ಲರಂತೆ, 

ದಕ್ಷ ಸೇವೆಯಲ್ಲಿ ಹೊಳೆಯುತಿಹಳು ಬೆಳದಿಂಗಳಂತೆ.......

ವಿರಾಮವಿರದ ರಮಣೀಯರ ಸಾಧನೆಯ ಸ್ಮರಿಸುವ ಕ್ಷಣ, 

ನಮಗೆ ವಿಶ್ವ ಸಂಸ್ಥೆ ಕೊಟ್ಟ ಮಾರ್ಚ್ 8ರ ಅಂತರರಾಷ್ಟ್ರೀಯ ಮಹಿಳಾ ದಿನ........

ಶ್ರೇಷ್ಠ ಮಹಿಳೆಯರು ಸ್ಫೂರ್ತಿಯಾಗಲಿ,

ಅರಳುವ ಕುಸುಮಗಳಿಗಿಂದು, 

ಹರಸುವೆ ನಾ ತರುಣಿಯರ ಪರಿಶ್ರಮದ ಸಾಹಸಕೆ ಜಯವಾಗಲೆಂದು.........

- nagamani Kanaka

08 Mar 2024, 10:02 pm

- Nuage Laboratoire

08 Mar 2024, 09:03 am

- Nuage Laboratoire

08 Mar 2024, 08:43 am

ಜೋಕಾಲಿ

ಪ್ರಕ್ರತಿಯ ಮಡಿಲಲಿ ಒಲವಿನ ಜೋಕಾಲಿ,
ತೂಗಿ ಹಾಡುವೆ ನ ಪ್ರೇಮದ ಲಾಲಿ,
ಮಧು ಮಾಸ ಚಂದ್ರನ ಬೆಳದಿಂಗಳ ರಾತ್ರಿ,
ನನ್ನ ನಿನ್ನ ಪ್ರೇಮದ ಸುಮಧುರ ಮೈತ್ರಿ....

ಮುಂಜಾವಿನ ಮಂಜಿನ ಹನಿಗಳ ಜೊತೆಯಲಿ,
ನಿನ್ನ ಮುದ್ದಿಸಬೇಕು  ನನ್ನಿನಿಯ..
ಮಳೆ ನಿಂತ ಮೇಲೂ ಮರಗಳ ಎಲೆಗಳಲ್ಲಿ ಬಚ್ಚಿ ,
 ತೊಟ್ಟಿಕ್ಕುವ ಹನಿಗಳ ಜೊತೆ ಸರಸವಾಡಬೇಕು ಗೆಳೆಯ...

ಹೇಳಿಕೊಳ್ಳಬೇಕು ಮನದಾಸೆಯ ಜಾಲಿ ಜಾಲಿ,
ಕಾದಿರಬೇಕು  ಅಲ್ಲಿ ಪ್ರೀತಿ ತುಂಬಿದ ಲಾಲಿ...
ಕೊನೆತನಕ ನೀನಿರಬೇಕು ನನ್ನ ಉಸಿರಲಿ,
ಬಚ್ಚಿಟುಕೊ  ನನ್ನ ಹೃದಯ ಮಂದಿರದಲಿ.... 


ಮುಸ್ಸಂಜೆಯ ಆ ತಂಗಾಳಿಗೆ,
ಪಡುವಣ ದಿಕ್ಕು ರಂಗು ಚೆಲ್ಲುತಿರೆ...
ನನ್ನವನ  ತುಂಟಾಟ ಜಾಸ್ತಿ ಆಗುತಿರಲು ,
ಕದ್ದು ಮುಚ್ಚಿ ನೀಡಬೇಕು ಅವನ ಗಲ್ಲಕೊಂದು ಸಿಹಿ ಮುತ್ತು.....!


Love Kasthury

- kasthury k

05 Mar 2024, 07:14 pm

ಬಿಸಿಲು...

ಸೂರ್ಯನ ಕಿರಣಗಳು
ಮಾಡಿವೆ ಭೂಮಿ ಮೇಲೆ ದಾಳಿ..
ಬಿಸಿಲಿನ ಬೇಗೆ ತಾಳದೆ
ಕಾದು ಹೋಗಿದೆ ತಣ್ಣನೆ ಗಾಳಿ..
ರಣ ಬಿಸಿಲಿನ ಕೋಪಕ್ಕೆ !
ಕರಗಿದೆ ಹೆಣ್ಣಿನ ಎದೆ ಮೇಲಿನ ತಾಳಿ..
ನಡುಗುತ್ತಿವೆ ಪ್ರಾಣಿ ಪಕ್ಷಿಗಳು
ನೋಡಿ ಬೇಟೆಯಾಡೋ ಬಿಸಿಗಾಳಿ...

ಸೂರ್ಯೋದಯವನ್ನು ನೋಡಲು
ಕಾದುಕುಳಿತಿದ್ದೆ ಚಳಿಗಾಲದಲ್ಲಿ.!
ಸೂರ್ಯಾಸ್ತನಾದರೆ ಸಾಕು ಎಂದು
ಬೇಡಿಕೊಳ್ಳುವೆ ಈಗ ಆ ಭಗವಂತನಲ್ಲಿ.!
ಬಟ್ಟೆ ಒಣಗಿದರೆ ಸಾಕು,
ಡ್ಯೂಟಿಗೆ ಹೋಗಬೇಕೆಂಬ ಚಿಂತೆ ಮಳೆಗಾಲದಲ್ಲಿ.!
ಬೆವರಿನ ಹೊಳೆಯಲ್ಲಿ ಮುಳುಗಿ
ಬಿಸಿಲಿನ ಧಗೆಯಲ್ಲಿ ಒಣಗಿರುವೆ ಈ ಬೇಸಿಗೆಯಲ್ಲಿ.!

ಕಾಡು ಬೆಳೆಸಿ, ಮುಂದಿನ ಪೀಳಿಗೆ ಉಳಿಸಿ,
ಕೆರೆಗಳನ್ನ ತೊಡಿಸಿ, ಪ್ರಾಣಿ ಪಕ್ಷಿಗಳ ದಾಹ ತೀರಿಸಿ,
ಗಿಡಮರಗಳಿಂದ ಕಾಡು, ಕಾಡಿಂದ ನಾಡು,
ಕಾಡಿಲ್ಲದಿದ್ದರೆ ಕಷ್ಟವಾಗುವುದು ಜನರ ಪಾಡು...

✍️ ತಿಮ್ಮಪ್ಪ

- Zandu Jan

04 Mar 2024, 01:27 am

ಪ್ರೀತಿ...

ಪ್ರೀತಿ ಇದೊಂದು ಹೆಸರ? ಖಾಯಿಲೆನ? ಜೀವನನ? ಅಥವಾ ಸಿಹಿಯಾದ ಭಾವನೆನ...!
ಪ್ರೀತಿ ಬಲೆಗೆ ಬಿದ್ದು ಹೊರಬಂದವರೆಷ್ಟೋ..?
ಅದರಲ್ಲಿ ಸಿಕ್ಕಿಬಿದ್ದು ಸತ್ತವರ ಸಂಖ್ಯೆ ಇನ್ನೆಷ್ಟೋ..?
ಇದರಿಂದ ಲಾಭ ಉಲ್ಲವರೆಷ್ಟೋ,
ನಷ್ಟ ಅನುಭವಿಸದರಿನ್ನೆಷ್ಟೋ,.?

ಪ್ರೀತಿ ಸಮುದ್ರವನ್ನು ದಾಟಿಸುವ ಶಕ್ತಿಯು ಹೌದು,
ಪರ್ವತ ಶಿಖರವನ್ನು ಚುಮ್ಮಿಸುವ ಪ್ರೇರಣೆಯೂ ಹೌದು,
ಕೋಟ್ಯಾಧಿಪತಿಯನ್ನು ರೋಡಿಗೆ ತರುವ ದರಿದ್ರನು ಹೌದು,
ಭಿಕ್ಷುಕನನ್ನು ಕೊಟ್ಯಧಿಷನಾಗಿ ಮಾಡುವ ಶಕ್ತಿಯು ಹೌದು,

ಪ್ರೀತಿಯ ಕಟು ನೀತಿಗೆ ಮುರಿದುಹೋದ ಸಂಬಂಧಗಳೆಷ್ಟೋ,
ಪ್ರೀತಿಯ ಶಾಪಕ್ಕೆ ಮಸಣ ಕಂಡ ಹೆಣಗಳೇಷ್ಟೋ,
ಪ್ರೀತಿಯ ಆಟಕ್ಕೆ ಬೀದಿ ಬೀದಿ ತಿರುಗುತ್ತಿರೋ ಪ್ರೆಮಿಗಳೇಷ್ಟೋ,
ಪ್ರೀತಿಯ ಹುಚ್ಚಿಗೆ ಅಪ್ಪ ಅಮ್ಮಂದಿರು ತಿಂದ ನೋವುಗಳೇಷ್ಟೋ...

ಪ್ರೀತಿ ಇದೊಂದು ಕಾಲ್ಪನಿಕ ಸುಮಧುರ ಭಾವನೆ,
ನೆತ್ತಿಗೆ ಏರಿಸಿಕೊಂಡರೆ ಜೀವನ ಕಾಣುವುದು ಕೊನೆ,
ಜೀವನದ ಭಾಗವಾಗಿ ಸ್ವೀಕರಿಸಿದರೆ ಬಾಳಗುವುದು ಹಾಲು ಜೇನೆ,
ಪ್ರತಿ ಒಬ್ಬರಲ್ಲು ಪ್ರೀತಿ ಹಂಚಿದರೆ ಮೆಚ್ಚುವನು ಆ ಭಗವಂತನೇ,
✍️ ತಿಮ್ಮಪ್ಪ

- Zandu Jan

04 Mar 2024, 01:26 am