Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಈ ಕಾಲಿ ಎದೆ ತುಂಬಾ ನೀ ತಾನೆ ತುಂಬಿರುವೆ ಸುಳ್ಳಲ್ಲ ಕೇಳು ಈ ಪ್ರೇಮ ಸಾಲು ನಿನಗಾಗಿ ಕಾದಿರುವುದು ಬಡಪಾಯಿ ಈ ಹೃದಯ.....

- Nethra gowda

14 Apr 2024, 10:22 am

- Shravankumar Mudapaladinni

14 Apr 2024, 12:41 am

- Shravankumar Mudapaladinni

14 Apr 2024, 12:40 am

❤️ ನನ್ನವ್ವ ❤️

ನಿನ್ನೊಡಲಿನ ಕರುಳ ಬಳ್ಳಿ ನಾನು
ನಿನ್ನ ನೋವಲ್ಲೂ ನನ್ನ ನಗುವನ್ನು ಕಂಡು ಹಿರಿ ಹಿರಿ ಹಿಗ್ಗಿದಾಕೆ.....
ನೀ ನನ್ನವ್ವ.....
ನಾ ಬಿದ್ದು ಎದ್ದಾಗ , ನಿನಗೆ ನೋವಾದಂತೆ ನೀ ಕಂಬನಿ ಸುರಿಸಿದಾಕೆ.....
ನೀ ನನ್ನವ್ವ.....
ಬದುಕಿನಲ್ಲಿ ಅದೆಷ್ಟೋ ಕಷ್ಟನೋವುಗಳಿದ್ದರೂ....... ನಿನ್ನೊಡಲಿನಲಿ ಕಷ್ಟ ಕಾರ್ಪಣ್ಯವೆಂಬ ಬೆಂಕಿಯ ಒಡಲಾಗ್ನಿಯನ್ನು ನಿನ್ನಲ್ಲೇ ಅವಿತಿಟ್ಟೆ......
ನೀ ನನ್ನವ್ವ.....
ನೀ ಪ್ರೀತಿಯ ಸೆಲೆ....
ನೀ ಕಲಿಸಿದೆ ಬದುಕಿನ ಕಲೆ.... ತ್ಯಾಗಮಯಿ... ಪ್ರೇಮಮಯಿ.... ಕರುಣಾಮಯಿ....
ನೀ ನನ್ನವ್ವ..... ❤️

- A. D. BHOVI

11 Apr 2024, 02:51 pm

ಪ್ರೀತಿಯ ಭರವಸೆ

ನನ್ನರಮನೆಯ ನಗುವನ್ನು ತಂದ ನನ್ನ ಕಂದ.....
ಅಕ್ಕರೆಯ ಸಿಹಿ ಸಕ್ಕರೆ ತಂದ ನನ್ನ ಕಂದ
ನೀ ನೋಡಲು ಬಲು ಚಂದ.....
ನನ್ನೆದೆಯ ಬಾಂದಳದಲ್ಲಿ ಪ್ರೀತಿಯ ಅಪ್ಪುಗೆಯ ತಂದ ಕಂದ......
ನೀ ನನ್ನ ಪ್ರೀತಿಯ ಭರವಸೆಯ ಕಂದ
ನೀ ಯಾವಾಗಲು ತಂದೆ ಬರೀ ಆನಂದ....

- A. D. BHOVI

11 Apr 2024, 02:25 pm

ನನ್ನವಳಿಗಾಗಿ❤️

ಹೂವಿನಂತ ನಿನ್ನ ಕೆನ್ನೆಯ ಮೇಲೆ ಜೇನು ತಂದಿಟ್ಟ ಮಧುರ ಹನಿಯಂತೆ ತುಂಬಿ ತುಳುಕುತ್ತಿದೆ ನಾಚಿಕೆಯ ರಂಗು…❤️☺️
ಈ ಹೃದಯದ ಕನ್ನಡಿಯೊಳಿಗಿನ ಪ್ರತಿಬಿಂಬ ನಿನ್ನದಾದ ಮೇಲೆ ಪ್ರತಿ ಎದೆ ಬಡಿತವು ನಿನ್ನ ಹೆಸರೇ ಕೂಗಿದಂತೆ..

- Abhinandan Chougala

06 Apr 2024, 02:22 pm

ಕಲ್ಪನೆಯಲ್ಲಿ ಕಂಡವಳು...!

ಕಲ್ಪನೆಯಲ್ಲಿ ಕಂಡವಳು...!

ನೀ ಅಪ್ಸರೆಯೋ, ಊರ್ವಶಿಯೋ ನಾ ಕಂಡಿಲ್ಲ....
ನೀ ರಾಧೆಯೋ.. ಸೀತೆಯೋ ಗೊತ್ತಿಲ್ಲ....
ಸ್ನೇಹಿತೆಯೋ..ದೇವತೆಯೂ ತಿಳಿದಿಲ್ಲ...
ಬರುವೆಯೋ..ಇರುವೆಯೋ ಬಿಟ್ಟು ಹೋಗುವೆಯೋ ನೀ ಹೇಳಿಲ್ಲ...
ಹೃದಯದಲ್ಲಿ ಬರೆದ ನಿನ್ನ ಹೆಸರನ್ನು ಹಣೆಯಲ್ಲಿ ಬರೆದಿಲ್ಲ...
ಕವಿತೆಯಲ್ಲಿ ನಿನ್ನ ಚಿತ್ರಿಸಿದ್ದರೂ ನಿನಗೆ ನಾನು ಕಾಣಲಿಲ್ಲ...
ಹೃದಯ ಬಡಿಯುವಾಗೆಲ್ಲ ನೆನಪಾಗುವ ನಿನ್ನ ನೆನಪನ್ನು ಮರೆಯಲು ಸಾಧ್ಯವಿಲ್ಲ.....

ಕವಿತೆಯಾಗಿ ಬಂದಳು.....!

- Nachikethan N

03 Apr 2024, 02:35 pm

ಮನಸ್ಸಿನ ಗೊಂದಲ

ಮನಸಲೇನೊ ತಳಮಳ ಇಂದು
ಕಾರಣ ತಿಳಿಯದಾಗಿದೆ ಏನು ಎಂದು
ಮನದಲ್ಲಿ ಹೇಳಲಾಗದ ಭಾವನೆ ಒಂದು
ಹುಡುಕಬೇಕಿದೆ ಕಾರಣವೇನೆಂದು

ಹೊಸದೇನೋ ಹೊಸತೇನೋ
ಅರಿಯಲಾಗದ ಭಾವನೆ ಏನೋ
ಭಯವೇನೋ ಭರವಸೆಯೇನೋ
ತಿಳಿಯದಿರುವ ಭವಿಷ್ಯವೇನೋ

ಸಡಗರವೇನೋ ಸಂಭ್ರಮವೇನೋ
ನಿನ್ನೊಂದಿಗೆ ಕಳೆದಿರುವ ಸಮಯವೇನೋ
ಕಾಳಜಿಯೇನೋ ಕನಿಕರವೇನೋ
ನಿನ್ನಲ್ಲಿ ಇಟ್ಟಿರುವ ನಂಬಿಕೆಯೋನೋ

ತಿಳಿಯದಾಗಿದೆ ತೋಚದಾಗಿದೆ
ಇದಕ್ಕೆಲ್ಲ ಉತ್ತರ ನಿನ್ನಲ್ಲಿದೆ...

- HTK

31 Mar 2024, 06:49 pm

ರಾಧೆ ಪ್ರೀತಿಯ ದೇವತೆ ಮತ್ತು ಸೀತೆ?

ಸಹನೆಯ ದೇವತೆ ಇರಬೇಕು ಎಷ್ಟಿದ್ದರೂ
ಭೂಮಿಯ ಮಗಳಲ್ಲವೇ!

ಜನಕನ ಪುತ್ರಿ ಜಾನಕಿ ಜಗವ ಕಾಣದವಳಲ್ಲ ಆದರೂ ಸಹನೆಯ ಹೊತ್ತು ನಡೆದಿದ್ದಳು ತಾಳಿದವನು ಬಾಳಿಯಾನು ಅನ್ನುವ ಮಾತು ಅವಳಿಗೆ ಅನ್ವಯಿಸಲೇ ಇಲ್ಲ ಎಷ್ಟು ವಿಪರ್ಯಾಸಲ್ಲವೇ! ಅಂದೆಂದೋ ಭೂಮಿಯ ಗರ್ಭದಿಂದ ಹೊರಬರುವ ಮುನ್ನ ಅಮ್ಮನ ಮಾತಿಗೆ ರೋಧನೆಗೆ ಕಿವಿಗೊಟ್ಟಿರಬೇಕು ವೈದೇಹಿ ಭೂಮಾತೆ ತನಗೆ ತಾನು ಹೇಳಿಕೊಂಡಿರಬೇಕು ಅವಳ ಒಡಲ ತುಳಿದು ಕೃತಜ್ಞತೆ ಇಲ್ಲದೆ ಜನರು ಮಾಡಿರುವ ವಿಕೃತಗಳನ್ನು. ಬಹುಶಃ ಅಂದೆ ನಿಶ್ಚಯಿಸಿರಬೇಕು ಮೈಥಿಲಿ ಮೌನಧಾರಣೆ ಉತ್ತಮವೆಂದು ಸಹನೆಶೀಲೆ ಹೆಣ್ಣೆಂದು!

ಹೇಗಿರಬಹುದು ಆ ಸೀತೆ ಇದ್ದಿರಬಹುದು ಮುಂಜಾನೆ ಇಬ್ಬನಿಯಲ್ಲಿ ಮಿಂದ ಭುವಿಯ ಹೊಳಪಿನಂತೆ, ಉಕ್ಕಿದ ಹಾಲ ನೊರೆಯ ಮೃದುವಿನಂತೆ. ಕಡುಗಪ್ಪು ಕೇಶರಾಶಿ ತಿಳಿಗೆಂಪು ಕೆನ್ನೆಯೋತ್ತು ನಸುನಾಚಿದ ಬೆಳದಿಂಗಳಂತೆ.

ವರಿಸಿ ಬಂದ ಚಿನ್ನದ ಮಹಲಿನ ಸರದಾರ ಹೃದಯದಲ್ಲಿ ಬಚ್ಚಿಡಬೇಕಿತ್ತು ಅವಳನ್ನು ಕಾಡಿನ ಪಾಲಾಗಿಸುವ ಬದಲು!
ಗಂಡನ ನೋವಿನ ಕೂಗಿಗೆ ಮರುಗಿದ್ದೆ ಸೀತೆಯ ತಪ್ಪಾಯಿತೆ ಮತ್ತೆ ಅವನ ಸೇರಿದ ಸಂಭ್ರಮದಲ್ಲಿ ಲೋಕಕ್ಕೆ ಅಂಜಿ ಅಗ್ನಿ ಮಡಿಲ ಮಗುವಾಗಿದ್ದೆ ತಪ್ಪಾಯಿತೆ ಆದರೇನು ಬಂತು ಪ್ರಯೋಜನ ಮತ್ತೆ ಕಾಡಿನ ಪಾಲಗಲಿಲ್ಲವೇ ಅವಳು ರಾಜ್ಯದ ಜನರಿಗಾಗಿ ಮಡದಿಯ ತೊರೆದ ರಾಜನಿಗಾಗಿ!

ಮತ್ತೆ ಯಾವ ನಂಬಿಕೆಯೊತ್ತು ಹೋದಾಳು ಆ ರಾಜನ ಅರಮನೆಗೆ ಪ್ರೀತಿ ವಿಶ್ವಾಸಗಳೇ ಇಲ್ಲವಾದಮೇಲೆ!
ಸಹನೆ ಸತ್ತು ಹೋಗಿರಬೇಕು ಅವಳಲ್ಲೂ ಅಮ್ಮನ ಮಡಿಲು ನೆನಪಾಗಿರಬೇಕು ಜನರ ನಿಂದನೆಗಳು ಕೇಳಲಾರದೆ ಎಲ್ಲಿಂದ ಬಂದಳೋ ಅಲ್ಲಿಗೆ ಹೊರಟುಹೋದಳು ಸುಶೀಲೆ ತನ್ನದಲ್ಲದ ಪಾಪಿ ಪ್ರಪಂಚವನ್ನು ತೊರೆದು..

- ಚುಕ್ಕಿ

31 Mar 2024, 01:30 pm

ಆ ದಿನ

ಅವನ ಮೊದಲ ಕಣ್ ನೋಟಕ್ಕೆ ಮನ ಸೋತ ಆ ದಿನ,
ಆತನ ನಗುವನ್ನು ಕದ್ದು ನೋಡಿದ ಆ ದಿನ
ತಿರುಗಿ ಒಮ್ಮೆ ನನ್ನ ನೋಡಬಾರದೇ ಎಂದೇನಿಸಿದ ಆ ದಿನ,
ಒಂದು ಮಾತನಾದರು ಆಡಬಾರದೇ ಎಂದು ಕೊಂಡ ಆ ದಿನ,
ಅವನು ಅಹಂ ತೋರಿಸುತ್ತಿದ್ದನೆ ಅಂದುಕೊಂಡ ಆ ದಿನ,
ಅವನ ನೋಟವನ್ನು ಗಮನಿಸಿದರು ಗಮನಿಸಿದಂತೆ ನಟಿಸಿದ ಆ ದಿನ,
ಆವನಾಗಿಯೇ ಬಂದು ನನ್ನ ಮಾತಾಡಿಸಿದ ಆ ದಿನ,
ಮೊದಲ ಬಾರಿಗೆ ಪ್ರೀತಿಯನ್ನು ವ್ಯಕ್ತ ಪಡಿಸಿದ ಆ ದಿನ,
ಅವನ ಪ್ರೀತಿಯ ಹೃದಯಕ್ಕೆ ಲಗ್ಗೆ ಇಟ್ಟ ಆ ದಿನ,
ಅವನ ಜೊತೆ ಸಪ್ತಪದಿ ತುಳಿದ ಆ ದಿನ,
ಅವನ ಹೆಸರಿನ ಜೊತೆಗೆ ನನ್ನ ಹೆಸರ ಸೇರಿಸಿದ ಆ ದಿನ,
ಅವನ ಮನೆಗೆ ಸೇರೋದ್ದು ಬಲಗಾಲು ಇಟ್ಟ ಆ ದಿನ,
ಸುಖ ದುಃಖಗಳಲಿ ಒಂದಾಗಿ ಬಾಳಿದ ಆ ದಿನ,
ಬದುಕಿನ ಬುತ್ತಿಯೊಳ್ ಇನ್ನೆಷ್ಟು ಆ ದಿನಗಳು,
ಸೇರುತಿಹುದು ಕನಸೆಂಬ ಆ ದಿನದೊಳ್......!
Love Kasthury

- kasthury k

30 Mar 2024, 08:23 pm