Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕೊನೆಯ ಸಾಲುಗಳು ನಿನಗಾಗಿ

ಕರೆ ಮಾಡಿ ಕರೆದೆ ನೀ ನಿನ್ನ ವಿವಾಹದ ಸಂಭ್ರಮಕ್ಕೆ
ಲೆಕ್ಕಿಸದೆ ನನ್ನ ಭಾವನೆಗಳ ಹಾತೊರಿಕೆ
ಕೇವಲ ನಿನ್ನ ಮಾತಲ್ಲಿತ್ತು ಪ್ರೀತಿಯ ಸಲಿಗೆ
ನಿನಗೆ ಕೇಳಿಸದೆ ಹೋಯಿತು ನನ್ನೀ ಮನದ ಚಡಪಡಿಕೆ

ಕಳೆದಿರುವೆ ಏಷ್ಟೋ ದಿನವ ನಿನ್ನಾ ನೆನಪಲಿ
ನೀ ಹಿಂತಿರುಗಿ ಬರುವೆ ಎನ್ನೊ ಭರವಸೆಯಲಿ
ಆದರೇ ಇಂದು ನನ್ನೀ ಮನ ತುಂಬಿದೆ ನಿರಶೆಯಲಿ
ಬೀಳ್ಕೊಡುತ್ತಿರುವೆ ನಿನ್ನೀ ನೆನಪುಗಳ ಸಂಗ್ರಹಣೆಗೆ ಇಂದು ನನ್ನೀ ಮನಸಲಿ....

ಈ ನನ್ನ ಕೊನೆಯ ಸಾಲುಗಳು ನಿನಗಾಗಿ ಮತ್ತು ನಿನ್ನ ಸಂಪೂರ್ಣ ನೆನಪುಗಳ ಮುಕ್ತಯಕ್ಕಾಗಿ

- HTK

14 Feb 2024, 12:08 am

ನಾ ನಿನ್ನ ನಲ್ಲ, ಬೇರಾರು ಅಲ್ಲ...

ಕವನ ಬರೆದು ತಿಳಿಸಲು ನಾ ಕವಿಯಲ್ಲ,
ಪಾಠದಲಿ ಹೇಳಲು ನಾ ಶಿಕ್ಷಕನಲ್ಲ,
ಹಠದಲ್ಲಿ ವಾದ ಮಾಡಲು ನಾ ನಿನ್ನಂತೆ ವಕೀಲನಲ್ಲ,
ನಿನ್ನ ಅರ್ಥ ಮಾಡಿಸಲು ನಾ ಜೀವನವ ಸವೆಸಿದೆನಲ್ಲ,
ಒಮ್ಮೆ ಮನವ ಕೇಳು ಗೆಳತಿ ಅದು ಹೇಳುವುದೆಲ್ಲ,
ನಾ ನಿನ್ನ ಮನದ ಮನವ ಕದ್ದು ಗೆದ್ದ ನಲ್ಲ,
ನಾನಾರೂ ಅಲ್ಲ, ನಿನ್ನ ನಲ್ಲನಲ್ಲದೇ ಬೇರಾರು ಅಲ್ಲ

____ tippu _____

- tippu

13 Feb 2024, 11:21 pm

ಒಂದು ಕ್ಷಣದ ಕಷ್ಟ-ಸುಖ

ಕಷ್ಟ ಯಾರಿಗಿಲ್ಲ ಹೇಳಿ
ಯಾವ ಕಷ್ಟತಾನೆ ಬರುವುದು ನಮ್ಮ ಕೇಳಿ
ಇದರಿಂದಾಗಿ ಆಗಾಗ ಆಗುತೈತೆ ನಮ್ಮ ಮನಸ್ಸಿನ ಮೇಲೆ ದಾಳಿ
ಆದರೂ ಉಸಿರಾಡುತ್ತಿದ್ದೇವೆ ಆಮ್ಲಜನಕ ಎಂಬ ಗಾಳಿ

ಅಳು ವೆಂಬುದು ಬೇಸರ ಎಂಬುದರ ರೂಪ
ಮನದಲ್ಲಿ ಅಡಗಿದೆ ನೋವೆಂಬ ತಾಪ
ಇದೆಲ್ಲಾ ನಾನು ಯಾವ ಜನ್ಮದಲ್ಲಿ ಮಾಡಿದ ಪಾಪ
ಈಗ ಅನುಭವಿಸುತ್ತಿದ್ದೇನೆ ಅದರ ಶಾಪ

ನಗು ಎಂಬುದು ಜೀವನದ ಒಂದು ಕ್ಷಣ
ಆ ಒಂದು ಕ್ಷಣಕ್ಕಾಗಿ ನಮ್ಮೆಲ್ಲರ ಪಣ
ಆದರೆ ನಗುವನ್ನು ಕೊಂಡುಕೊಳ್ಳಲು ನಮ್ಮಲ್ಲಿಲ್ಲ ಹಣ
ಆದರೂ ಖುಷಿಯಾಗಿದ್ದೇವೆ ಕಾರಣ ನಮ್ಮ ತಂದೆ ತಾಯಿಯ ಋಣ

- HTK

13 Feb 2024, 09:12 pm

ನಾ ಮೆಚ್ಚಿದ ಹುಡುಗ

ನಾ ಒಬ್ಬ ಹುಡುಗನ ಮೆಚ್ಚಿದ್ದೆ
ಅವನೇ ನನ್ನ ಜೊತೆಗಾರನಾಗಲಿ ಎಂದು ಬಯಸಿದ್ದೆ
ಕಣ್ತುಂಬ ಕನಸ ತುಂಬಿದ್ದೆ
ಅವನ ಬರುವಿಕೆಗಾಗಿ ಕಾದಿದ್ದೆ

ನಂಬಿಕೆಯಿಂದ ಅವನೊಂದಿಗೆ ಎಲ್ಲವ ಹೇಳಿದ್ದೆ
ಅತಿಯಾಗಿ ಅವನ ನಂಬಿದ್ದೆ
ಪ್ರತಿದಿನ ಅವನೊಂದಿಗೆ ನಗುತ್ತಿದ್ದೆ
ಅವನು ಹತ್ತಿರವಿರಲಿ ಎಂದು ದಿನ ಬಯಸುತ್ತಿದ್ದೆ

ಹೀಗೆ ಕಳೆದಿತ್ತು ವಾರಗಳು
ಮಧ್ಯದಲ್ಲೆ ಮೂಡಿತ್ತು ಬಿರುಕುಗಳು

ಈಗೋ(Ego)ಎಂಬ ಭೂತ ಅಲ್ಲೇ ಜನಿಸಿತ್ತು
ಸೆಲ್ಫ್ ರೆಸ್ಪೆಕ್ಟ್(Self respect)ಎಂಬ ಮಾತು ಆಗಾಗ ಬರುತ್ತಿತ್ತು
ಒಬ್ಬರನ್ನೊಬ್ಬರು ನೋಡಿದರೆ ಮೈ ಉರಿಯುತ್ತಿತ್ತು
ಆದರೂ ಎಲ್ಲೋ ಮನದಂಚಿನಲ್ಲಿ ಖುಷಿ ತುಂಬಿರುತ್ತಿತ್ತು

Finally
ನನಗೂ ಅವನಿಗೂ ಸಂಪರ್ಕವೇ ಇಲ್ಲ
ಯಾವುದೇ ಸಾಮಾಜಿಕ ತಾಣಗಳ ಗೋಜಿಲ್ಲ
ಅವನ ಬರುವಿಕೆಗಾಗಿ ನಾ ಕಾಯುತ್ತಿಲ್ಲ
ಆದರೂ ನಾ ಅವನ ಮರೆತಿಲ್ಲ

- HTK

13 Feb 2024, 09:03 pm

- Nuage Laboratoire

13 Feb 2024, 03:29 pm

- Nuage Laboratoire

13 Feb 2024, 03:29 pm

ನಲ್ಮೆಯ ಸಖಿ

ಓ ಹೊನಲೇ ದಟ್ಟನೆಯ ಕಾನನದೊಳಗೆ ನೀ ಅವಿತಿರಲು,
ನಾ ಬೆಟ್ಟವ ಸುತ್ತಿ ಬರುವೆ ನಿನ್ನ ನೋಡಲು,,
ನೀ ಎಂದರೆ ಸದಾ ನನ್ನೆದೆಯಲ್ಲಿ ಹೊಸ ಬಗೆಯ ಅಮಲು,
ನೀ ಹರಿಯುವ ಇಂಪಾದ ಶಬ್ದದ ಸ್ವರವೇ ನನ್ನೆರಡು ಕಿವಿಗೆ ಮಿಗಿಲು.....!


ನನ್ನೊಳಗೆ ಮರೆಮಾಚಿದೆ ಅವ್ಳ
ಮುಗ್ದ ನಗುವೊಂದು,
ಪುಟದ ಹಾಗೆ ತೆರೆಯಲಾಗದು ಅವಳ ಮನಸ್ಸನೆಂದು,,
ಅವಳೊಂದು ನನ್ನೊಳಗಿನ ಮಂದಿರದ ಕೇಂದ್ರ ಬಿಂದು,
ಆದರೂ ಅವಳ ಹೆಸರೇ ಕವಿದಿದೆ ನನ್ನ ಹೃದಯದಲಿ ಎಂದೆಂದೂ......!!


ನಿತ್ಯವೂ ನೆನಪಾಗಿ ಕಾಡುವುದು ಗೆಳತಿ ನಿನ್ನ ಧ್ವನಿ,
ಆದರೂ ಮಾತಾಡಲು ನೀನೇಕೆ ಆಗಿರುವೆ ಇಷ್ಟೊಂದು ಮೌನಿ,
ನನ್ನ ಸಖಿಯ ಸ್ವರ ಕೇಳದೆ ನಾನಾಗಿರುವೆ ನಿನ್ನ ಧ್ಯಾನಿ,
ಸದಾ ಗೆಳತಿ ನಾನೆಂದು ನಿನ್ನ ಪ್ರೀತಿಗೆ ಮುಗ್ದ ಅಭಿಮಾನಿ.....!!!



✍️...... ಅಭಿಷೇಕ್ ಟಿ ಎ

- Abhishek T A

11 Feb 2024, 07:55 am

ಬೆಳಕು

ನಂಬಿಕೆ ಹರಡಲಿ...
ವಿಶ್ವಾಸ ಬೆಳಗಲಿ..
ದ್ವೇಷವೆಂಬ ಕತ್ತಲು ಸರಿದು,
ಪ್ರೀತಿಯ ಬೆಳಕು ಹರಿಯಲಿ…

ಸಹೋದರತೆ ಹರಡಲಿ…
ವಾತ್ಸಲ್ಯತೆ ಬೆಳಗಲಿ…
ಜಾತೀವಾದವೆಂಬ ಕತ್ತಲು ಸರಿದು,
ಮಾನವೀಯತೆಯ ಬೆಳಕು ಹರಿಯಲಿ..

ಧರ್ಮ ಹರಡಲಿ..
ನ್ಯಾಯವು ಬೆಳಗಲಿ…
ಭ್ರಷ್ಟತೆಯೆಂಬ ಕತ್ತಲು ಸರಿದು,
ಅಭಿವೃಧಿಯ ಬೆಳಕು ಹರಿಯಲಿ…

ಆತ್ಮವಿಶ್ವಾಸ ಹರಡಲಿ ..
ಆಶಾಜ್ಯೋತಿ ಬೆಳಗಲಿ ..
ಅಜ್ಞಾನವೆಂಬ ಕತ್ತಲು ಸರಿದು ,
ವಿಜ್ಞಾನದ ಬೆಳಕು ಹರಿಯಲಿ ..
ಶುಭೋದಯ....

- Arjunraddi Hanchinal

10 Feb 2024, 05:25 am

ಅಪ್ಪ - ಅಮ್ಮ ವಿಪರ್ಯಾಸ.

ಹೆತ್ತವರು ಹೊತ್ತವರು ಅಪ್ಪ-ಅಮ್ಮ
ಓದಿಸುವರು ಅಪ್ಪ-ಅಮ್ಮ
ಮದ್ವೆ ಮಾಡಿಸುವರು ಅಪ್ಪ-ಅಮ್ಮ
ಇವರನ್ನ ನಾವು ಮರಿಯೋದು
ನಾವು ಅಪ್ಪ-ಅಮ್ಮ ಆದಾಗ.
ಕಾರಣ ನಾವು ಅಪ್ಪ-ಅಮ್ಮ,
ಇದೆ ವಿಪರ್ಯಾಸ.

- Shivayya C G

09 Feb 2024, 09:35 pm

ಸ್ನೇಹದ ಮಹತ್ವ


ಮೀಟಲು ಆಗುವುದಿಲ್ಲ ! ಕಲ್ಲಿನ ವೀಣೆಯನು !
ಅರಿಯಲು ಸಾದ್ಯವಿಲ್ಲ ! ಮನಸಿನ ಭಾವನೆಯನು !
ಕಂಡು ಹಿಡಿಯಲು ಆಗುವುದಿಲ್ಲ ! ಮೀನಿನ ಹೆಜ್ಜೆಯನು !
ಹಾಗೆಯೆ ! ಅನುಭವಿಸಬೇಕು ! ಸ್ನೇಹದ ! ಆನಂದವನು !
ವರ್ಣಿಸಲು ಸಾದ್ಯವಿಲ್ಲ ! ಸ್ನೇಹವೆಂದರೆ ಏನೆಂದು !
ಅನುಭವಿಸಬೇಕು ! ಆನಂದಿಸಬೇಕು ! ಕೇಳಬೇಡ ಏಕೆಂದು !
ಕಾಣದ ದೇವರ ನೆನೆದು ! ಅವನ ದಯೆ ಕೋರುವ ಜನ ನಾವು !
ಅರಿಯುವುದಿಲ್ಲ ಏಕೆ ನಿರ್ಮಲ ಸ್ನೇಹದ ನೋವು !
ಭಾವಿಸುವುದಿಲ್ಲ ಏಕೆ ! ಸ್ನೇಹ ಒಂದು ಮದುರ ಸಂಬಂದವೆಂದು !
ಕಟ್ಟುವಿರೆಕೆ ! ಅದಕೂ ! ಸಲ್ಲದ ಕಥೆಗಳನು !
ಬದುಕು ಅಂದರೆ ! ಏನೆಂದು ! ಅರಿಯಬೇಕಿದೆ ನಾವಿಂದು !
ನಗಿಸಲು ಸಾದ್ಯವದಿದ್ದರೂ ಚಿಂತೆಯಿಲ್ಲ ! ಆದರೆ ಸುಮ್ಮನೆ ಅಳಿಸಬೇಡಿ !
ಕಣ್ಣೀರು ಒರೆಸದಿದ್ದರೂ ಪರವಾಗಿಲ್ಲ ! ಆದರೆ ಸುರಿಯುವ ಹಾಗೆ ಮಾಡಬೇಡಿ !
ನಿಮಗೆ ಸ್ನೇಹದಲಿ ನಂಬಿಕೆ ಇರದಿದ್ದರೆ ಚಿಂತೆಯಿಲ್ಲ !
ಆದರೆ ನಂಬಿದವರ ನಂಬಿಕೆಯ ಕೆಡಿಸಬೇಡಿ !
ಜಗದಲಿ ! ಕಣ್ಣಿಲ್ಲದ್ದವರಿಗಿಂತ ! ಕಣ್ಮುಚ್ಚಿ ಕುಳಿತವರೇ ಹೆಚ್ಚು
ಕನಸು ಕಾಣುವವರಿಗಿಂತ ! ಕನಸು ಕಳೆದು ಕೊಂಡ ವರೇ ಹೆಚ್ಚು !
ಸ್ನೇಹದ ಲೋಕದಲಿ ಸ್ನೇಹದ ಬೆಲೆ ಎಂದಿಗೂ ಹೆಚ್ಚು.

ಇಂದ ಶ್ರೀ ಎ ಆರ್ ಹಂಚಿನಾಳ. ಶಿಕ್ಷಕರು ,
ಸರಕಾರಿ ಕೆ ಪಿ ಎಸ್ ಮುಗಳೊಳ್ಳಿ. ತಾ/ಜಿ - ಬಾಗಲಕೋಟ.

- Arjunraddi Hanchinal

09 Feb 2024, 09:31 pm