Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

- Sharu Sharath

25 Apr 2024, 09:36 pm

- Sharu Sharath

25 Apr 2024, 09:36 pm

ಪ್ರೀತಿ ಅಂದ್ರೆ
ತನಗೆ ಯಷ್ಟೇ ಕಷ್ಟ ಇದ್ರು
ತನ್ನ ನಂಬಿ ಬಂದವಳನ್ನ ಸುಖದಿಂದ ನೋಡಿಕೊಳ್ಳಬೇಕು
ಅವಳ ಸೌಂದರ್ಯ ಮಾಸಿದರು
ಹಣ ಕರಗಿದರು
ವಯಸ್ಸು ಏರಿದಾಗಲು
ಅವಳನ್ನು ಪುಟ್ಟ ಮಗುವಂತೆ ನೋಡಿಕೊಂಡು ಹೋಗುವುದೇ ನಿಜವಾದ ಪ್ರೀತಿ

- Sharu Sharath

25 Apr 2024, 09:35 pm

ಮನಸು ಮತ್ತು ಬುದ್ಧಿ

ಮನಸು ಹೇಳುತ್ತದೆ
ನಾವೆಲ್ಲರೂ ಕ್ಷಣಿಕ ಇರುವಷ್ಟು ದಿನ ಎಲ್ಲರಿಗೂ ಒಳ್ಳೆಯವನಾಗಿರು
ಆದರೆ ಬುದ್ಧಿ ಹೇಳುತ್ತದೆ
ಒಳ್ಳೆಯವರಿಗೆ ಮಾತ್ರ ಒಳ್ಳೆಯವನಾಗಿರು
ಮನಸು ಮತ್ತು ಬುದ್ಧಿಯ ಜಂಜಾಟದಲ್ಲಿ
ಯಾವುದನ್ನು ಕೇಳಬೇಕು ಯಾವುದನ್ನು ಬಿಡಬೇಕು
ಎಂಬುದು ತಿಳಿಯದಾಗಿದೆ
ಆದರೆ ನನ್ನ ಪ್ರಕಾರ ಮನಸಿನ ಮಾತು ಕೇಳುವುದೇ
ಉತ್ತಮ ಎನಿಸುತ್ತದೆ.

- Chaithanya J

20 Apr 2024, 09:01 pm

ಯೊಚನೆ ಮತ್ತು ಭಾವನೆ

ಲೆಕ್ಕಾಚಾರವಿಲ್ಲದ ಭಾವನೆಗಳು
ತಡೆಹಿಡಿಯದ ಗೋಡೆಗಳಂತೆ
ಅರ್ಥವಿಲ್ಲದ ಯೋಚನೆಗಳು
ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ

ಭಾವನೆಗಳು ಮತ್ತು ಯೋಚನೆಗಳು
ಒಂದಕ್ಕೊಂದು ಕೊಂಡಿ ಇದ್ದಂತೆ
ಎರಡರಲ್ಲಿ ಹಿಡಿತವಿಲ್ಲದಿದ್ದರೆ
ಮುಂದಾಗುವ ಅನಾಹುತಕ್ಕೆ ಹೊಣೆಯರಂತೆ

ನನ್ನಲ್ಲಿ ನನಗೆ ಸಾವಿರ ಪ್ರಶ್ನೆ ಇದೆ
ಅದನ್ನು ಸಮರ್ಥಿಸಿಕೊಳ್ಳಲು ಉತ್ತರ ನನ್ನಲ್ಲಿದೆ
ನನ್ನ ಉತ್ತರ ಯಾರನ್ನು ಮೆಚ್ಚಿಸದು
ಮೆಚ್ಚಿಸುವುದರಿಂದ ನನಗೆನು ದಕ್ಕದು

- HTK

19 Apr 2024, 06:17 pm

ಪ್ರೀತಿ ❤️❤️❤️

ಅದು ಹೇಗೋ ಬಾಳಲ್ಲಿ ಬಂದಾಕಿ..

ಪ್ರೀತಿಗೆ ಜೀವ ತುಂಬಿದಾಕಿ...

ಕಷ್ಟ ಸುಖದಲ್ಲಿ ಭಾಗಿಯಾದಕಿ..

ಜೀವನಕ್ಕೆ ಬೆಳಕಾಗಿರ್ತೀನಿ ಅಂದು

ನನ್ನ ಜೀವನನೇ ಕತ್ಲೆ ಮಾಡಿ ಹೋದಲ್ಲೆ...


.... ಮಲ್ಲು ಜಮಾದಾರ್

- ಮಲ್ಲು ಜಮಾದಾರ್

15 Apr 2024, 04:26 pm

ಬದುಕು

ಬರುವಾಗ್ಲೂ ಏನೂ ತಂದಿಲ್ಲಾ...

ಹೋಗುವಾಗ್ಲೂ ಏನೂ ಒಯೋದಿಲ್ಲ...

ನಾನು ನಂದು ಅನ್ನೋದು ಮಾತ್ರಾ ಬಿಡಲಿಲ್ಲ....

ಆದೂರುನು ಮನುಷ್ಯತ್ವನ್ನು ಮರೆತು

ಸ್ವಾರ್ಥಕ್ಕಾಗಿ ಹೊಡೆದಾಡ್ತೀವಲ್ಲ....


.... ಮಲ್ಲು ಜಮಾದಾರ್

- ಮಲ್ಲು ಜಮಾದಾರ್

15 Apr 2024, 04:03 pm

ಎಲ್ಲಿ ಹೋಯಿತು ಹಕ್ಕಿ

ಎಲ್ಲಿ ಹೋಯಿತು ಹಕ್ಕಿ
ಕಾಣದಂತಾಗಿ
ಜೀವ ಕಿತ್ತು ಹೋಯಿತು
ನನ್ನ ಪ್ರಾಣವ ನೆಕ್ಕಿ

ಆಸೆಗಳ ಸುಟ್ಟಾಕಿ
ಭಾಷೆಗಳ ಮುರುದಾಕೀ
ನೋವು ಕೊಟ್ಟು ಹೋದಾಕೀ
ಕಾಣದಂತಾಕೀ

ನೂರು ಕನಸಿನ ಕನ್ಯೆ
ಕಾಣದಂತಾಗಿ
ಕೊಳ್ಳಿ ಇಟ್ಟು ಹೋದಳು
ಮತ್ತೆ ಬಾರದಾಕೀ

ಚಿಂತೆ ಸುಡುಗಾಡು ಸೇರಿ
ಸತ್ತ ಮೇಲೆ ಹೆಗಲ ಏರಿ
ಹೂತ್ತು ಒಯ್ಯುವ ಜೀವಕ್ಕೆ
ಭಾರವಾಗಿ ಹೋದಳಾಕೀ

ಬಾರದ ಬದುಕಿನ
ಚಿಂತೆ ನಿನಗೆ ಯಾಕೋ
ಹೋದಳು ಆಕೇ
ನಿನಗೆ ಕೈ ಕೊಟ್ಟು

- shankar gargi

15 Apr 2024, 02:24 pm

- A. D. BHOVI

14 Apr 2024, 04:20 pm

ನಿತ್ಯ ಮಲ್ಲಿಗೆ

ನಿತ್ಯ ಮಲ್ಲಿಗೆಯಾಗು
ನಿತ್ಯ ಸೇವೆಗೆ ಯಾಗು
ಎನ್ನ ದೇವನ ಮುಡಿಗೆ
ನಿತ್ಯ ಮಲ್ಲಿಗೆಯಾಗು

ಬೆಳ್ಳಂಬೆಳಗಿನ ಬೆಳಕು
ನಿನ್ನ ಚೆಲುವಿನ ಸೂಬಗ
ನಿನ್ನ ಪಾವನ ಪೂಜೆ
ಎನ್ನ ದೇವನ ಮುಡಿಗೆ

ಸಾಲು ಸಾಲಿನ ಬೆಳ್ಳಿಗೆ
ಬೆಳ್ಳಿ ಬಟ್ಟಲಿನ ಗೋಂಚಲ
ಸೂಸಿ ಬರುವ ನಿನ್ನ ಪರಿಮಳ
ಎನ್ನ ದೇವನ ಮುಡಿಗೆ

ನಿನ್ನ ಪರಿಮಳದ ಪರಿಯ
ನಾನೇನು ಅರಿಯೇ
ನಿನ್ನ ಸೇವೆಯ ಭಕ್ತಿ
ಎನಗಿಲ್ಲ ದೊರೆಯೇ

- shankar gargi

14 Apr 2024, 03:10 pm