ಅ-ಳ ಅಂದುಕೊಂಡದ್ದು.
* ಅ-ಳ ಅಂದುಕೊಂಡದ್ದು *
ಅಂದ ಇವುದು
ಆಕಾರದಲ್ಲಿ
ಇಂದು
ಈಗೇಕೆ
ಉದಯ.
ಊರ
ಋಷಿಗಳು ನಸುಕಲ್ಲಿ
ಎದ್ದು
ಏಕಾಂಗಿಯಾಗಿ
ಐತಿಹಾಸದ
ಒಳಕಣ್ಣು
ಓಡುತ್ತ ಇತ್ತು.
ಔಚಿತ ದೇಹ
ಅಂ
ಆಃ ಎನ್ನುತ್ತಾ
ಕಣ್ಣೆದುರು
ಖಂಡಶಶಿಧರನ
ಗಮನಿಸಿದಾಗ.
ಘನರಸದ ಬೆಳಕು
ಙ ಶಬ್ದವು ನಾಲಿಗೆಯಿಂದ
ಚಲಿಸಲಿಲ್ಲ.
ಛಂದಸ್ಸು ಹಾರಾಡುವ
ಜಂಗಮ
ಝರಿ ಝೇಂಕರಿಸಿತ್ತು.
ಞ ಜ್ಞಾನದ ಜೊತೆ
ಟಂಕಾರ ಸೇರಿ
ಠಣ್ ಠಣ್ ಎಂದವು.
ಡಂಕ ಭೋರ್ಗರೆದು
ಢಾಳವಯಿತು
ಣ.
ತಕ್ರನ
ಥಟ್ಟು ನೋಡಲು
ದಂಶನ
ಧರಧುರ ಪಡುವಷ್ಟು
ನಕ್ಷತ್ರಗಳ ಸಾಲು.
ಪರಾಶ್ರಯದ
ಫಕೀರ
ಬಂಗಾರಕ್ಕೆ
ಭ್ರಮರ ಮುತ್ತಿಕ್ಕುವುದು.
ಮತಿಗೆಡಿ ಇವನ
ಯತ್ನ
ರಂಗಾಗಲಿಲ್ಲ.
ಲಲಿತೆ
ವಸಂತೆ
ಶಂಖದ ನಾದ
ಷಟ್ಕರ್ಮಿಯ
ಸಂತೆ.
ಹಕ್ಕಿಯಂತೆ ಹಾರುವ ಮನಸ್ಸು ಗ
ಳಿಗೆ ನೋಡುತ್ತಿತ್ತು ,ಗಂಟೆ ಏಳು....
- ಈಶ, ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
30 Nov 2014, 05:16 am
Download App from Playstore: