ಯಾರು? ಶಾಶ್ವತ
* ಯಾರು? ಶಾಶ್ವತ *
ಅರಮನೆ ಕಟ್ಟಿ ಅರಸ ಆರಾಮಗಿಲ್ಲ
ಜಗದ ಯಾವ ಜಾಗದಲೂ.
ಅದಕ್ಕೆ ನಾವು ನೀವು ಇಡಲಿಲ್ಲ ಸಿಂಬೆ
ಇಂದು ನೋಡುವವರಿಗೆ ಬೊಂಬೆ.
ಸಾಧು ಪ್ರಾಣಿಗೆ ಪ್ರಾಣ ಹೆಚ್ಚು ದಿನ ಇರಲ್ಲ
ಸದ್ಯದ ಪ್ರಕಾರ ಅಲ್ಲ
ಜೀವಿಗಳ ಹುಟ್ಟಿನಿಂದ
ಬಲಿತವರ ಬಡಿಯಲ್ಲ ಸಿಟ್ಟಿನಿಂದ.
ಬ್ರಹ್ಮ ಬರೆದ ಮೊಲೆಹಾಲು ಹಸುಳೆಗೆ
ಅರಿಯದ ಕಂದನ ಬಾಯಿ ಎದೆಗೆ
ರಕ್ತವನ್ನೆಲ್ಲ ಹಾಲಾಗಿಸಿ ತುಟಿಗಿಟ್ಟು
ಆಕಾರವಾಗಿಸುವಳು ತಾಯಿ.
ಹುಟ್ಟಿದವರೆಲ್ಲ ಉಳಿಯಲ್ಲ ಭೂಮಿಗೆ
ಅರಸ, ಸಾಧು, ಮಗು ಎಲ್ಲರೂ
ಕೊಟ್ಟಳೆಲ್ಲ ತಾಯಿ ಕೋರಿಕೆ
ಕೊಟ್ಟವರಷ್ಟೇ ಉಳಿವರು ಉತ್ತರಕ್ಕೆ.......
-ಈಶ, ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
30 Nov 2014, 05:14 am
Download App from Playstore: