ನಗುವ ಬಗೆ

ಪ್ರೀತಿಯ ಸಾಗರದ ಅಲೆಗಳ ನಡುವೆ
ಬಚ್ಚಿಟ್ಟು ಕೊರಗಿದೆ ಹೇಳಲಾರದೆ
ಸಾಗುತ್ತ ದೂರ ದೂರ ಕುಪ್ಪಳಿಸಿ
ಜಿಗಿದು ಕಲ್ಲು ಬಂಡೆಗೆ ಗುದ್ದಿದೆ
ನೋವು ತಡೆಯಲು
ಪ್ರೀತಿ ಬಳ್ಳಿ ಬಚ್ಚಿಟ್ಟ ಕ್ಷಣ ಸೊರಗಿತ್ತು ಅಲೆಯ ನಿನಾದ
ಬಂಡೆಯು ಕರಗದು ಮನಸ್ಸು ಮಾಸದು
ಅವಳ ನಗೆಯ ಬಗೆಗೆ

- ರವಿಕುಮಾರ

07 Feb 2016, 04:10 am
Download App from Playstore: