ಮತ್ತೇರಿಸುವ ಮುತ್ತು
ಮತ್ತು ಬರಿಸುವ ಮುತ್ತು ಸುರಿಯಲೆ
ಮತ್ತೇ ಬರಿಸದಿರುವ ಮುತ್ತು ಪೋಣಿಸಲೆ
ಮತ್ತು ಮುತ್ತಿಲ್ಲದ ಮಾತು ನುಡಿಯಲೆ
ಮೆಲ್ಲನೆ ಏದುಸಿರಿನ ಗಮ್ಮತ್ತು ತೋರಿಸಲೆ
ಮಾತಿಲ್ಲದ ಮುತ್ತಿನ ಮಳೆಯಿಂದ ಮನ ತಣಿಸಲೆ
ಮೋಡಿಯ ಪಿಸುಮಾತಿನ ಸವಿ ನುಡಿಯಲೆ
ಮಧು ಇಂಗದ ಮುತ್ತಿನ ಮಾಯೆ ಕಲಿಸಲೆ
ಮುತ್ತಿನ ಮಂದಿರದಲಿ ಮತ್ತೇರಿಸುವ ಮುತ್ತು ಜೋಡಿಸಲೆ
ಮನವನ್ನು ನವಿರಾದ ಮುತ್ತಿನಿಂದ ಮುದಗೊಳಿಸಲೆ
ಮನೋಹರ ಕಂಗಳಲಿ ಮುತ್ತಿನ ಮಿಂಚು ಬರಿಸಲೆ
ಮುತ್ತಿನಿಂದ ಮತ್ತೇರಿಸುವ ಮುಖರವಿಂದವ ಹೆಚ್ಚಿಸಲೆ
ಮುತ್ತಿನ ಮನೆಯಲಿ ಮತ್ತಿಳಿಯದಂತೆ ಮುತ್ತಿಕ್ಕಿ ಮಲಗಿಸಲೆ
- ಆನಂದ್ ಕುಮಾರ
05 Feb 2016, 01:11 pm
Download App from Playstore: