ಕದ್ದಳು ನನ್ನನೆ

ಅರಿಯದಿರುವ ನನಗೆ ನೀನು
ಮೋಡಿ ಮಾಡಿ ಮರುಳನಾಗಿಸಿ
ಕದ್ದೆ ನನ್ನ ಮನಸ್ಸನ್ನು
ಗೆದ್ದೆ ನನ್ನ ಹೃದಯವನ್ನು

ಮೊದ ಮೊದಲು ಮಾತು ಇಲ್ಲ
ಮೌನವೆ ಕೂಡಿತಲ್ಲ
ಕಣ್ಣಾರೆ ಕಂಡೆ ನಾನು ನಿನ್ನ ತಳುಕು ಬಳುಕನು
ಸೋತು ಹೋದೆ ನಾನು ನಿನ್ನ ಅಂದಕೆ

ನೋಡುವ ನೋಟಕ್ಕಿಂತ ಆಡುವ ಮಾತಿಗಿಂತ
ನನ್ನನು ಕಾಡಿತು ನಿನ್ನ ಕನಸದು
ಕಣ್ಣಲ್ಲಿ ತುಂಬಿಕೊಂಡೆ ಮನಸ್ಸಲ್ಲಿ ಬಚ್ಚಿಕೊಂಡೆ
ಹೇಳಲಾಗದೆ ಪ್ರೀತಿ ಮಾತು

ಓಡಿ ಬಂದೆ ನೀನು ಹೃದಯದಲ್ಲಿ
ಜಿಂಕೆಯಂತೆ ಜಿಗಿದು ಜಿಗಿದು
ಮುತ್ತಿನ ಮದ್ದು ನೀಡಿ ನಿನ್ನಲಿ ನಾನಾಗಿ
ಸಿಲುಕಿದೆ ನಾ ಪ್ರೀತಿ ಸುಳಿಗೆ....

- Irayya Mathad

03 Feb 2016, 01:42 am
Download App from Playstore: