ನನ್ನ ಸ್ನೇಹಿತ

ನಗು ನಲಿಯುತ ನಗು
ಜೀವನವೆಲ್ಲ ನೀ ನಗುತಾಯಿರು

ಸ್ನೇಹ ಪ್ರೀತಿಗೆ ನೀನು ಆಧಾರ ದೀಪವಾದೆ
ನನ್ನ ಹೃದಯಕ್ಕೆ ಹತ್ತಿರವೇ ಹರಿದಾಡಿದೆ ನೀ
ರಕ್ತ ಕಣವೆಲ್ಲ ಸೇರಿ ಕುಣಿದಾಡಿತು

ಸೋಲು ಗೆಲುವನು ಮೀರಿ
ಗೆಳೆತನ ಕೂಡಿ ಗೆಲುವಾಯಿತು
ಹಾಸ್ಯ ಸೊಗಸಾಗಿ ನೆಲೆನಿಂತು ನಲಿದಾಡಿತು
ನಮ್ಮ ಬಾಳಲ್ಲಿ ಹೊಸ ಶೃತಿಯು ಶುರುವಾಯಿತು

ಅರಿಯದ ಈ ಸಂಬಂಧ ಸ್ನೇಹವಾಗಿ ಮನೆಮಾಡಿತು
ನಮ್ಮ ಉಸಿರಲ್ಲಿ ಉಸಿರಾಗಿ ಉಸಿರಾಡಿತು
ಗೆಳೆಯ ನಿನ್ನನ್ನು ಕಾಣದೆ ಹಲುಬಿದೆ ನಾ

ರಕ್ತ ಸಂಬಂಧಗಳಾಚೆ ನನಗಾಗಿ ಧರೆಗಿಳಿದು ಬಂದೆ
ನಿನ್ನ ಒಂದೊಂದು ಮಾತುಗಳು ನೆನಪಾಯಿತು
ಇಂದು ಕಣ್ಣಲ್ಲಿ ಕಂಬನಿಯು ನಿನ್ನದಾಯಿತು...

- Irayya Mathad

28 Jan 2016, 01:45 pm
Download App from Playstore: