೪ಲ್ವರು
ನಾವು ೪ಲ್ವರು ಮಾರಾಯ್ರೆ
ನಮ್ಮ ಕತೆ ಕೇಳಿ ರಾಯರೇ
ಮೊದಲು ನಾನು , ಇಲ್ಲ ಮೊದಲು ನಾನು, ಅಲ್ಲಲ್ಲ ನಾನು
ಎಲ್ಲರ ಜಗಳದಲ್ಲಿ ಬಡವಾದವನು ಇವನು
ಅದೇ ಮಾರಾಯ್ರೆ ನಾನು ೧ನೇಯವನು, ಇನ್ನೇನು ಪೂಜೆಗೆ ನೈವೇದ್ಯ ಮಾಡಿ ಕೊಡಿಸುವಷ್ಟರಲ್ಲಿ
ಪೂಜಾರಿಯಲ್ಲದವನು, ಮೈಲಿಗೆ ಮನಸ್ಸಿನವನು ಮಾಡುವ ವಾದ ನಿಮ್ಮ ಖಾದ್ಯ ನಮ್ಮ ದೇವರಿಗೆ ಖೇದ್ಯ
ಅದೇ ಮಾರಾಯ್ರೆ ನಾನು ೨ನೇಯವನು, ಅಲ್ಲಾ, ಗುಡಿಗೋಪುರ ನನ್ನದು ನೈವೇದ್ಯ ನನ್ನಿಷ್ಟದ್ದು
ಅವನ್ಯಾರು ನಡುವಿನವನು ಇಷ್ಟವಿಲ್ಲದ ನೈವೇದ್ಯ ಮಾಡುವವನು, ಖಂಡಿಸುವ ಹಕ್ಕು ನನದು
ದಿನಂಪ್ರತಿ ಇವರ ಮಧ್ಯೆ ನೈವೆದ್ಯವಿಲ್ಲದೆ ಬರಿ ಢೊಳ್ಳು ಘಂಟೆ ನಾದ
ಹುಚ್ಚಪ್ಪಗಳಿರ ಅರೆಪಾವು ಮನಿಸ್ಸಿನವರಾ ಬೇಡುವುದಿಲ್ಲ ನಾ ನಿಮ್ಮ ಗುಡಿಗೋಪುರವ
ನಿಮ್ಮಿಷ್ಟದ ಖಾದ್ಯವ
ನಾನಿಲ್ಲಿ ಬರುವುದು ಭಕ್ತಿಗೆ, ಸಿಗದು ಇಲ್ಲಿ ಅದು ಇನ್ನೆಂದಿಗೆ
ಬಡವಾಗುವುದು ಖಚಿತ ಎಂದು ಹೊರಟೆನಿಲ್ಲಿಂದ ಬಾರದೆ ಇನ್ನೆಂದಿಗೆ
- ಆನಂದ್ ಕುಮಾರ
28 Jan 2016, 12:29 pm
Download App from Playstore: