ಬಲೂನು

ನನ್ನ ತುಟಿಗೆ
ನಿನ್ನ ತುಟಿಯ ಸೇರಿಸಿ
ಉಸಿರನು ಊದಿದೆ
ನಾ ಉಬ್ಬಿ ಉಬ್ಬಿ ದಪ್ಪನಾದೆ
ನನ್ನ ಬಾಯೊಳಗೆ ನಾಲ್ಕು ಕಾಳು ಹಾಕಿ
ಎಳೆದು ಸುತ್ತಿ ಗಂಟು ಹಾಕಿದೆ
ಗಂಟನು ತುರುಕಿ ಹೊಟ್ಟೆಯೊಳಗೆ ಸೇರಿಸಿ
ನುಲಿದು ರಬ್ಬರ್ ತುಂಡು ಕಟ್ಟಿದೆ
ಸೇಬು ಹಣ್ಣಿನಂತೆ ಕಾಣುವ ನನ್ನನು
ಜಾತ್ರೆಗೆ ಬಂದ ಹುಡುಗನೊಬ್ಬ ಕೊಂಡ
ನನ್ನ ಬಣ್ಣ ನೋಡಿ ಆಕಾರ ನೋಡಿ ಸಂತೋಸಗೊಂಡ
ರಬ್ಬರ್ ಹಿಡಿದುಕೊಂಡು ಎಳೆದು ಎಸೆದು
ಹೊಡೆದು ಬಡಿದು ಕೊನೆಗೆ ನನ್ನ ಜೀವ ತೆಗೆದ

- ಚೇತನ್ ಬಿ ಸಿ

24 Jan 2016, 02:36 pm
Download App from Playstore: