ನಾ ಕಂಡ ಅವಳು

ತೀಡಿಟ್ಟ ಹುಬ್ಬು
ಮಿಂಚು ಮಿನುಗುವ ಕಣ್ಣು
ತುಟಿ ಬಿರಿದ ತೊಂಡೆ ಹಣ್ಣು
ಬಣ್ಣಿಸಲಿ ಹೇಗೆ ಕೆನ್ನೆಯನ್ನು?

ತುಳುಕಾಡೋ ಕೇಶ ರಾಶಿ
ಅದಕ್ಕೊಂದೇ ಮೇಘ ಸಾಟಿ
ನೀನಿರಲು ಹೃದಯ ಸ್ಫೂರ್ತಿ
ಜೀವ ಬಂದ ಸುಂದರ ಮೂರ್ತಿ

ಹಾಲ್ದೆನೆ ಹೊಯ್ದ ಮೈಯ ಬಣ್ಣ
ಹಾವಂತೆ ಬಳುಕೋ ಸೊಂಟ ಸಣ್ಣ
ಯೌವ್ವನಭರಿತ ಎದೆಯಂಗಗಳನ್ನ
ಪದಗಳಲ್ಲಿ ಬಚ್ಚಿಡಲೇ ನಾ?

ನಡು ಸಣ್ಣ, ಉದರ ಬಿಳ್ಮುಗಿಲು
ನಡುವೆ ಹೊಕ್ಕಳ ಟಿಸಿಲು
ಮತ್ತೆ ನಯ ವಿನಯ,
ಬಣ್ಣಿಸಲು ತುಂಬಾ ದಿಗಿಲು

ಪಾದರಸ ನಡಿಗೆ
ಶಾರದೆ ನುಡಿಗೆ
ಈ ಅಪೂರ್ವ ಸುಂದರಿಗೆ
ಕೆಂದಾವರೆ ನಗುಮೊಗದೊಡವೆ.

- ಶ್ರೀಗೋ.

05 Oct 2014, 05:02 pm
Download App from Playstore: