ಕೆಲವರು

ಎಲ್ಲಿಂದಲೋ ಬಂದಿಹಿವು
ಎಲ್ಲಿಗೋ ಹೋಗುತಿಹೆವು
ಬಂದು ಹೋಗುವುದುರ ನಡುವೆ
ಮನವ ಮುಟ್ಟಿದವರು ಹಲವರು
ಮನದಲಿ ಉಳಿದವರು ಕೆಲವರು..

ಜೊತೆಯಲಿ ಇರುವವರು
ಹೃದಯಕ್ಕೆ ಹತ್ತಿರಾದವರು
ಭಾವನೆಗಳಿಗೆ ಸ್ಪಂದಿಸಿದವರು
ಮನದಲಿ ಬೇರುರಿದವರು
ಕಣ್ಣ ವರೆಸಿ ನಕ್ಕವರು ಕೆಲವರು ..

ಎಂದೂ ಮರೆಯಲಾಗದವರು
ದೂರಿದ್ದು ನೆನಪಿಗೆ ಬರುವವರು
ಎದುರಿದ್ದು ಕಾಣದಂತವರು
ಸಾಲದ ಪ್ರೀತಿಯ ತೋರಿದವರು
ಸ್ನೇಹಕ್ಕೆ ಪಾತ್ರರಾದವರು ಕೆಲವರು..

ಬೇಡುವೆನು ದೇವರಲಿ ಹಗಲಿರುಳು
ಸದಾ ನಗುತಿರಲಿ ಎಲ್ಲರೂ
ದೂರಾಗದಿರಲೆಂದ ಕೆಲವರು
ಅವರೆಲ್ಲರೂ ನನ್ನವರು.

...ಭೀಮಾ ಬೆಳಹಾರ

- Bhima Belahar

05 Jan 2016, 05:04 pm
Download App from Playstore: