ಲತೆ
ಹಸಿರ ಬೇಡಿದೆ ಒಣ ಬದುಕು
ತರುರಾಯನ ಬಯಕೆಯಲಿ...!
ಬೇಕಿಲ್ಲ ಸಖಿ ವರ್ಷಳು
ಪ್ರಿಯಕರನ ಗುಂಗಿನಲಿ...... !!
ಮಾಸಿದೆ ಎನ್ನಸ್ತಿತ್ವದ ವಿಶ್ವಾಸ
ಆಧಾರಕ್ಕೊಬ್ಬನಿಲ್ಲದೆಯೆ !
ಎಂದಿಗಿಟ್ಟಿಹನೊ ಮುಹೂರ್ತ
ಎನ್ನ ಸ್ವಪ್ನದ ಲಗ್ನಕೆ ....... !!
ಬಾಡುತಿಹವು ಪರ್ಣ ಕುಸುಮಗಳು
ದೊರೆತರೂ ಪೊಶಕಾಂಶ !
ತೊಡುತಿಹುದು ಎನ್ನೆಲ ಬರಡ ಉಡುಗೆಯ
ಇದ್ದರೂ ಫಲವತ್ತತೆಯ ಅಂಶ ......!!
ಎಲ್ಲಿಹೆಯೊ ಮುದ್ದು ತರುರಾಯ
ನಿನ್ನ ಅಪ್ಪುಗೆಯ ಆಸೆ ಭುಗಿಲೆದ್ದಿದೆ !
ನಿನ್ನ ಬಯಕೆಯ ಸಂತೆಯಲಿ
ನಾನು ಲತೆಯೆಂಬುದೇ ಮರೆತಿದೆ .....!!
- ವಿನಾಯಕ್
04 Jan 2016, 11:51 am
Download App from Playstore: