ಅವ್ವ
ಅವ್ವ ...........
ಅವ್ವ ನೀ ಚಿಂದಿ ಬಟ್ಟೆ ಉಟ್ಟು
ನನಗೆ ಹೊಸ ಅಂಗಿಯ ತೊಡಿಸಿದೆ
ಅವ್ವ ನೀ ತಂಗಳನ್ನ ತಿಂದ್ದು
ನನಗೆ ಬಿಸಿ ಅನ್ನವ ಉಣಿಸಿದೆ
ಅವ್ವ ನೀ ಓದು ಬರಹ ಬಾರದ ದಡ್ಡಿಯಾಗೆ
ನನಗೆ ಓದು ಬರಹ ಕಲಿಸಿದೆ
ಗೋವಿನ ಮುಗ್ದತೆ ನಿನ್ನ ಮುಖದಲ್ಲಿ
ಜಗನ್ಮಾತೆಯ ಕರುಣೆ ನಿನ್ನ ಕಂಗಳಲಿ
ನನ್ನ ಪಾಲಿನ ದೇವರು ನೀ
ನನ್ನ ಪಾಲಿನ ಆದರ್ಶ ಮೂರ್ತಿ ನೀ ಅವ್ವ .............
:- ಸಂತೋಷ್
- santhosh
23 Nov 2014, 05:18 am
Download App from Playstore: