ನವಿಲೆ....
ಹೇಳು ನವಿಲೆ ಯಾಕೆ ಹೀಗಾದೆ ?
ಯಾಕೆ ಇಷ್ಟು ಮೌನಿಯಾದೆ ?
ಮೇಘಗಳಲಿ ತೇಲಿ ಬಂದೆ
ಗಿಡ-ಮರಗಳಿoದ ಹಾರಿ ಬಂದೆ
ಹೇಳು ಈಗೇಕೆ ದೂರ ಹೋದೆ ?
ನಸುಕಿನಲೆ ಕುಣಿಯುತಾ ಬಂದು
ಕೂಗಿ ಕರೆದೆ ನನ್ನ ಅಂದು
ಈಗೇನಾಯಿತು ನಿನಗೆ ಇಂದು ?
ಮೊದ - ಮೊದಲು ಕಂಡಾಗ ನಾಚಿಯೇ - ನಾಚಿದೆ
ಕೆಲದಿನಗಳಾದಾಗ ನಗು - ನಗುತಾ ಬಂದೆ
ಹೇಳು ಈಗೇಕೆ ನನ್ನಿoದ ದೂರಾದೆ ?
ಈ ನಿಸರ್ಗ ನಿನ್ನ ಪರ ಇಲ್ಲವೆ ?
ಈ ಜನರಿಂದ ನಿನಗೆ ರಕ್ಷಣೆಯಿಲ್ಲವೆ ?
ಇಲ್ಲಿ ನಿನ್ನವನಂತ ನಾನಿಲ್ಲವೆ ?
ಬೇಗ ಹೇಳು ಇನ್ಮುoದೆ ನೀ ಬರುವುದಿಲ್ಲವೆ ?
ಮಾಗಿದ ಮಾವು ತಂದೆ ಸವಿಯಲೆoದೆ
ನೀನು ತಿoದು ಬಿಟ್ಟಿದ್ದನ್ನೇ ನಾನು ತಿoದೆ
ಅದರ ಸಿಹಿಯ ರೂಪವನ್ನು ಅರಿತುಕೊoಡೆ
ಈಗೇಕೆ ಬರಲೊಲ್ಲೇ ಅಂದಿನಂತೆ?
ಹಣ್ಣುಮಣ್ಣಾಯಿತಿಲ್ಲೇ ನಿoತು-ನಿoತೆ
ಏನು ? ನಿನ್ನ ಗರಿಯ ಅಂದ
ಕುಣಿವ ನಿನ್ನ ಕುಣಿತ ಚಂದ
ಸಾಲಿತೆ? ನೋಡಲೇರಡು ಕಣ್ಣು ನಂದ
ಬಂದು ನಿಲ್ಲು ಈಗ ಮುoದ
ನೋಡಿ ಪಡುವೆ ನಾ ಆನಂದ
ಬೀರೇಶ ಕೋಟಿ
ಬಿ.ಎಸ್.ಸಿ.ಕ್ರಷಿ ಮೊದಲನೆ ವರ್ಷ
ಕ್ರಷಿ ಮಹವಿಧ್ಯಾಲಯ, ವಿಜಯಪುರ
- BIRESH KOTI
12 Dec 2015, 10:51 am
Download App from Playstore: