ಪ್ರೀತಿಯ ನಶೆ
ಈ ಪ್ರೀತಿ ಏಕೆ ನನಗೆ ಇಂದು ನಶೆಯ ತಂದಿದೆ
ದುಬಿಯಂತೆ ಚಲಿಸುವಾಗೆ ಮೋಡಿ ಮಾಡಿದೆ
ಅದೇಕೊ ಪ್ರೀತಿಯು ನನ್ನ ಕಾಡಿದೆ
ಇಂಗು ತಿಂದ ಮಂಗನಂತೆ ಕುಣಿಸಿ ನಗುತಿದೆ
ಎಲ್ಲಿಂದಲೋ ಯಾವಾಗಲೋ ಬಂದು ನನ್ನ
ಹೃದಯಕೆ ಬೇಡಿ ಹಾಕಿದೆ
ಗಾಳಿಯಂತೆ ನುಸುಳಿ ನನ್ನ ಮನವ ಕದ್ದಿದೆ
ಭೂಮಿ ಮೇಲೆ ಕಾಲು ಇನ್ನೂ ನಿಲ್ಲದಾಗಿದೆ
ಒಂಟಿತನದ ಸಂತೆ ಈಗ ಮಾಯವಾಗಿದೆ
ಯಾಕೋ ಏನೊ ನನ್ನೆ ನಾನೆ ಮರೆಯುವಾಗಿದೆ
ಜಗವು ಏಕೆ ನನ್ನ ಬೆನ್ನ ಸುತ್ತುತಾಯಿದೆ
ರೋಡಿನಲ್ಲಿ ರೋಮಿಯೊ ಆಗಿ ಕೂಗುವಾಗಿದೆ
ನಾನು ನನ್ನ ಪ್ರೀತಿಗೆ ಸೋತುಹೋದೆನಾ
ಸೋತ ಮೇಲೆ ಗೆದ್ದ ಬದುಕು ನನ್ನದಲ್ಲವೆ
ಯಾಕಿತರಾ ಕಾಣೆನುನಾ ಪ್ರೀತಿಯ ಬಲೆಗೆ ನಾನು ಸೆಳೆದು ಹೋದೆನಾ....
- Irayya Mathad
12 Dec 2015, 12:48 am
Download App from Playstore: