ಲಗಾಮಿಲ್ಲದ ಕುದುರೆ
ತಿಳಿಗೇಡಿ ಮನಸೇ ತಿಳಿಯುವ ಮನಸೇ
ಹದಿನಾರು ದಾಟಿದ ಹದಿಹಸಿಯ ಮನಸೇ
ಮಂಕು ಮರುಳ ತುಂಬಿದ ಮದ್ದಾನೆ ನೀನು
ಸುತ್ತಲಿನ ತಿಳಿಬೆಳಕ ತಿಳಿಯದ ಕೋಡಿ ನೀನು
ಆರೆತ್ತು ಮೂರೆತ್ತು ಏರುತ್ತ ಹೋಗುವ
ಸಂಗಡದ ಸಂನ್ಯಾಸಿ ಸಹವಾಸ ಬೇಡೆಂದೆ ನೀನು
ಆರೇಳು ಮದಗಳು ಸೇರಿ ದುಷ್ಟ ಮಾಡಿಹೆ ನಿನ್ನ
ದುಷ್ಟರ ಸಂಘದ ಹಿರಿತೆಲೆಯು ನೀನಾದೆ
ತಗ್ಗಿ ಬಗ್ಗಿ ನಡೆಯುವ ವಿನಯವು ಬರಲಿಲ್ಲ
ಮುಳ್ಳಿನ ದಾರಿಯೇ ಮುದವೆಂದು ನಡೆದೆಲ್ಲ
ಹಾಲು ಜೇನಿನ ಮಾತು ನೀ ಕಲಿಯಲಿಲ್ಲ
ಹಾಲಾಹಲವು ನಿನ್ನ ಮೈತುಂಬ ಬೆರೆಯಿತಲ್ಲ
ಹೂವಾಗಿ ಕಾಯಾಗಿ ಹಣ್ಣಾಗಿ ಇರಲಿಲ್ಲ
ದೂರ ದುರ್ನೀತಿ ಗುಣವು ನಿನ್ನ ಮನವ ತುಂಬಿತು
ಕಾಮದ ವಾಸನೆಯು ನಿನ್ನ ಕಾಯ ಕೆಡಿಸಿತಲ್ಲ
ಕಾಮಿನಿಯ ಸಹವಾಸ ನಿನ್ನ ದೂರ ಮಾಡಿತಲ್ಲ
ಹಾಕಿಲ್ಲ ಲಗಾಮು ನಿನ್ನ ಪಂಚ ಕುದುರೆಗೆ
ದಿಕ್ಕು ದೆಸೆಯು ಇಲ್ಲದ ದಾರಿಗೆ ನೂಕಿತು ನಿನ್ನನ್ನ
- Irayya Mathad
07 Dec 2015, 02:40 am
Download App from Playstore: