ಹೆಣ್ಣು ಹುಣ್ಣೆಂಬುದುಮಹಾ ತಪ್
ಮನುವಾದಿಗಳು
ಏನಾದರೂ ಹೇಳಲಿ
ಹೆಣ್ಣು ಹುಣ್ಣೆಂಬುದುಮಹಾ ತಪ್ಪು...
ಮಹಿಳೆಯೆಂಬುವವಳು ನಿಸ್ಸಾರ ಊಟದಲಿ ಇದ್ದಂತೆ ಉಪ್ಪು...
ಅವಳ ಇರುವಿಕೆ ಅರಿವಾಗುವುದು
ಆಕೆ ದೂರವಾದಾಗ...
ಎಂತಹುದೇ ಇರಲಿ ಭೋಜನ ಸಪ್ಪೆಯೆನಿಸುವುದು
ಉಪ್ಪು ಇಲ್ಲವಾದಾಗ...
ಕೆಲವೊಮ್ಮೆ ಉಪ್ಪು ಹೆಚ್ಚಾಗಬಹುದು ಅಡುಗೆಗೆ ಸಹಿಸಿಕೊಳ್ಳಬೇಕು...
ಕಡಿಮೆಯಾದರೂ ಉಪ್ಪು
ನಾಳೆ ಸರಿ ಹೋಗಬಹುದೆಂದು
ತಿಳಿದುಕೊಳ್ಳಬೇಕು...
ಉಪ್ಪಿಲ್ಲದ ಊಟ ಇದ್ದರೆಷ್ಟು ಇರದಿದ್ದರೆಷ್ಟು..
ಸಂಗಾತಿ ಇಲ್ಲದ ಬದುಕು
ಅಪೂರ್ಣವೆಂದರಿತವರೆಷ್ಟು...?
- ವಿನುತ ಕಿರಣ್ ಗೌಡ
02 Dec 2015, 10:53 am
Download App from Playstore: