ಅಗಲದಿರು ನೀ ನನ್ನ

ಯಾರೇನು ಬರೆದರೇನು
ನನ್ನ ಹೃದಯ ಮೌನವಾಗಿದೆ
ಅಳಲು ತೋಡಲು ಇನ್ನು ಏಕಾಂಗಿಯಾಗಿಹೆನು

ಯಾವ ಪಡುವಣ ಗಾಳಿ
ತೂರಿ ಬರುತಿದೆ ಕಾಣೆ
ಮನದೊಳಗಿನ ಆಸೆಯು
ಕಮರುತಿದೆ ಕಣ್ಣಲಿಂದು

ಹಾರು ಹಕ್ಕಿಗೆ ರೆಕ್ಕೆ ಬೇಡವೆ
ಗುಬ್ಬಚ್ಚಿಗೆ ಗೂಡು ಬೇಡವೆ
ಕನಸು ಕಾಣುವ ಮನಸ್ಸಿಗೆ
ಕಲ್ಪನೆಯ ಲೋಕ ಬೇಡವೆ

ಮರೆಯಲಾರದ ಮುಗ್ಧ ಪ್ರೀತಿಗೆ
ಅಳಿಯಲಾರದ ನೆನಪು ನೀಡಿದೆ
ನನ್ನ ಪ್ರೇಮ ಕಾವ್ಯಕೆ
ಶೃಂಗಾರ ಶೃತಿ ನೀನೆ

ಯಾವ ಒಲವಿನ ನೋಟಕೆ
ಕಳೆದು ಹೋದೆ ನಿನ್ನಲಿ
ನಿನ್ನ ಕೋಪದ ಬಿಸಿಯ ಗಾಳಿ
ದೂರ ಮಾಡಿತು ನನ್ನನೆ

ನಿನ್ನ ಹೆಜ್ಜೆಗೆ ತಾಳ ಹಾಕದೆ
ಗೆಜ್ಜೆ ಪೂಜೆ ಮಾಡಲೇನು
ಯಾಕೋ ಈ ಮನಸಿನ್ನೂ
ನಿನ್ನ ಜಪಿಸಿ ಸೊರಗುತಿದೆ...

- Irayya Mathad

01 Dec 2015, 08:32 am
Download App from Playstore: