ಬೆರೆತುಬಿಡು ಗೆಳಯ ಇಲ್ಲ ಮರೆತ

ಬೆರೆತುಬಿಡು ಗೆಳಯ
ಇಲ್ಲ ಮರೆತುಬಿಡು

ನಾವಿಬ್ಬರು ಎಂದಿಗೂ ರೈಲ್ವೆ ಕಂಬಿಗಳೆ
ನಾನಿಲ್ಲೆ ನೀನಲ್ಲೆ ಇರಬೇಕು ಬಾಳಲ್ಲೆ

ಸಾಗರವ ಹಾಸಿಗೆಮಾಡಿ ಹೊದುವ ಆಸೆಯೇಕೆ
ದೂರ ಮಾಡುತಿದೆ ನಮ್ಮನ್ನು ಎರಡು ತೀರಕೆ

ಹೃದಯಕೆ ಬತ್ತಿಯ ಹೊಸೆದು ವಿರಹದ ದೀಪವ ಹಚ್ಚಿ
ಅಡ್ಡಗೋಡೆಯ ಮೇಲೆ ರಕ್ತದ ಪ್ರೀತಿಯ ಬೆಳಗಬೇಕೆ

ಬೆರೆತುಬಿಡು ಗೆಳಯ
ಇಲ್ಲ ಮರೆತುಬಿಡು

- ವಿನುತ ಕಿರಣ್ ಗೌಡ

01 Dec 2015, 04:15 am
Download App from Playstore: