ಮುನಿಸಿಕೊಂಡ ಮಂದಾರೆ

ನಾನಿನ್ನು ನಿನಗೆಂದು ಬರೆದಿಹನು ಬ್ರಹ್ಮನು
ದೂರ ಅಗಲಿಕೆಗೆ ಹೊಣೆ ಯಾರು ಹೇಳಿಂದು !!ಪ!!

ಕೌತುಕವ ಕಾಡಿದೆ ಹಾಲಕ್ಕಿ ನುಡಿದಿದೆ
ಚಿಟಪಟ ಚಿಟ್ಟೆಗಳು ಹಾಡುತ್ತ ನಡೆದಿವೆ

ಚಂದಿರನು ಸೋತಿಹನು ನಿನ್ನ ಅಂದ ನೋಡುತಲಿ
ಕಳೆದುಹೋಗಿಹನವನು ಹುಣ್ಣಿಮೆಯ ಬೆಳಕಲ್ಲಿ

ಮನಸೆಂಬ ಮಂಟಪದಲ್ಲಿ ಪ್ರೀತಿಯ ಹಸೆಮಣೆ ಏರಿ
ನವದಂಪತಿಗಳು ನಾವೆಂದು ದೇವತೆಗಳು ಹರಸಿಹರು

ಏತಕೊ ಕಾಣೆನು ನಾ ನಿನ್ನ ಮೊಗದ ನಗುವನ್ನು
ಮೈಮರೆತು ಕಣ್ಮುಚ್ಚಿ ತುಂಬಿದೆ ನನ್ನ ನೀನು

ವಿರಹದ ಈ ವೇದನೆ ತಾಳೆನು ನಾನಿಂದು
ತಡಮಾಡದೆ ಬಳಿ ಬಂದು ಒರಗಿಂದು ನನ್ನ ತೋಳಲಿ

ಸಣ್ಣ ಹಠದಿಂದ ಮುಣಿಸಿಕೊಂಡೆ ನನ್ನಲಿ
ತರುವಾತ ಅರಿಯದಾದೆ ನನ್ನ ಹೃದಯದ ಕಂಬನಿ...

- Irayya Mathad

30 Nov 2015, 05:02 am
Download App from Playstore: