ಬಣ್ಣದ ಚಿಟ್ಟೆಗಳ ಮೋಜಿನ ಆಟ

ಏತಕೊ ತಮ್ಮ ನಿನಗಿಂತ ಚಿಂತಿ
ನೂರಾರು ಹೂಗಳ ಹಾವಳಿಯ ಸಂತಿ !!ಪ!!

ಬಣ್ಣ ಬಣ್ಣದ ಈ ಚಿಟ್ಟೆಗಳು ಚೆಂದ
ಮುಟ್ಟಲು ಹೋದರೆ ಮುಗಿಲಿನೆತ್ತರ

ಮನಸಿಗೆ ತಲೆಯಿಟ್ಟು ಮಣೆಹಾಕಬೇಡ
ಕಣ್ಮುಂದಿನ ಕತ್ತಲೆ ಕಾಣದಾಗಿತೋ

ಮಾಯದ ಜಿಂಕೆಗೆ ಆಸೆಯ ಪಡಬೇಡ
ಆಸೆಯು ನಿನಗೆ ಕಣ್ಣೀರು ತಂದಿತು

ಹದಿಹರೆಯ ಬಂದಾಗ ಹರಕೆಯು ಹೆಚ್ಚಿತು
ಮೋಹದ ಬಲೆಯು ಮೊಟಕು ಹಾಕಿತು ನಿನ್ನ

ಆರೆರಿದಮ್ಯಾಲ ಮೂರಕ್ಕಿಳಿಯಲಿಲ್ಲ
ಮದನ ಮಲ್ಲನು ನಿನ್ನ ಮನದಲ್ಲಿ ಕಾಡುವನು

ಮೋಹಿನಿಯ ಕಾಮನೆಯು ಕೆರಳಿಸುವುದು ನಿನ್ನ ಮನವ
ಬೆಂಕಿಯ ಜೊತೆ ಸರಸ ಭಸ್ಮದ ಫಲ ನಿನಗೆ...

- Irayya Mathad

28 Nov 2015, 02:51 am
Download App from Playstore: