ನೂಲಿಲ್ಯಾಕ ಚೆನ್ನಿ?
ಗಂಡ : ನೂಲಿಲ್ಯಾಕ ಚೆನ್ನಿ ನೂಲಿಲ್ಯಾಕ ಚೆನ್ನಿ ?
ಹೆಂಡತಿ : ಮೊಬೈಲ್ ಇಲ್ವೊ ಜಾಣ, ಮೊಬೈಲ್ ಇಲ್ವೊ ಜಾಣ.
ಕತೆಗಾರ : ಮೊಬೈಲ ತೆಗಿಸಿ ಕೊಟ್ಟ, ಮೊಬೈಲ ತೆಗಿಸಿ ಕೊಟ್ಟ||
ಗಂಡ : ನೂಲಿಲ್ಯಾಕ ಚೆನ್ನಿ ನೂಲಿಲ್ಯಾಕ ಚೆನ್ನಿ ?
ಹೆಂಡತಿ : ಇಂಟರ್‌ನೆಟ್ ಇಲ್ವೊ ಜಾಣ, ಇಂಟರ್‌ನೆಟ್ ಇಲ್ವೊ ಜಾಣ.
ಕತೆಗಾರ : ಇಂಟರ್‌ನೆಟ್ ಹಾಕಿಸಿ ಕೊಟ್ಟ, ಇಂಟರ್‌ನೆಟ್ ಹಾಕಿಸಿ ಕೊಟ್ಟ||
ಗಂಡ : ನೂಲಿಲ್ಯಾಕ ಚೆನ್ನಿ ನೂಲಿಲ್ಯಾಕ ಚೆನ್ನಿ ?
ಹೆಂಡತಿ : ಫೇಸ್‌ಬುಕ್ ಇಲ್ವೊ ಜಾಣ, ಫೇಸ್‌ಬುಕ್ ಇಲ್ವೊ ಜಾಣ.
ಕತೆಗಾರ : ಫೇಸ್‌ಬುಕ್ ಹಾಕಿಸಿ ಕೊಟ್ಟ, ಫೇಸ್‌ಬುಕ್ ಹಾಕಿಸಿ ಕೊಟ್ಟ||
ಗಂಡ : ನೂಲಿಲ್ಯಾಕ ಚೆನ್ನಿ ನೂಲಿಲ್ಯಾಕ ಚೆನ್ನಿ ?
ಹೆಂಡತಿ : ವಾಟ್ಸಾಪ್ ಇಲ್ವೊ ಜಾಣ, ವಾಟ್ಸಾಪ್ ಇಲ್ವೊ ಜಾಣ.
ಕತೆಗಾರ : ವಾಟ್ಸಾಪ್ ಹಾಕಿಸಿ ಕೊಟ್ಟ, ವಾಟ್ಸಾಪ್ ಹಾಕಿಸಿ ಕೊಟ್ಟ||
ಗಂಡ : ನೂಲಿಲ್ಯಾಕ ಚೆನ್ನಿ ನೂಲಿಲ್ಯಾಕ ಚೆನ್ನಿ ?
ಹೆಂಡತಿ : ಕ್ಯಾಂಡಿಕ್ರಶ್ ಇಲ್ವೊ ಜಾಣ, ಕ್ಯಾಂಡಿಕ್ರಶ್ ಇಲ್ವೊ ಜಾಣ.
ಕತೆಗಾರ : ಕ್ಯಾಂಡಿಕ್ರಶ್ ಹಾಕಿಸಿ ಕೊಟ್ಟ, ಕ್ಯಾಂಡಿಕ್ರಶ್ ಹಾಕಿಸಿ ಕೊಟ್ಟ||
ಗಂಡ : ನೂಲಿಲ್ಯಾಕ ಚೆನ್ನಿ ನೂಲಿಲ್ಯಾಕ ಚೆನ್ನಿ ?
ಹೆಂಡತಿ : ನಂಗೆ ಬರೋದಿಲ್ಲ ಜಾಣ, ನಂಗೆ ಬರೋದಿಲ್ಲ ಜಾಣ!
[ಹಳೆಯ ಜಾನಪದ ಹಾಡಿನ ನಕಲು]
- ಶ್ರೀಗೋ.
25 Nov 2015, 04:04 pm
Download App from Playstore: