ಪ್ರೀತಿ

ಬೀಸುವ ಗಾಳಿಯ ಹಿಡಿಯುವೆಯ?
ಗಾಳಿಯಲ್ಲಿ ತೇಲಿಬರುವ ಎಲೆಗಳ ಎಣಿಸುವೆಯ?
ರಾತ್ರಿಯ ಆಗಸಾದಿ
ತಾರೆಯಾ ಎಣಿಸುವೆಯ?
ಎಣಿಸಿನೋಡು ನೀನು,
ಎಣಿಸಿ ಲೆಕ್ಕವ ಹೇಳು ನನಗೆ ನೀನು,
ಎಣಿಸಲಾಗದೆ ಕುಳಿತರೆ
ನೀನು,
ಪ್ರೀತಿಸುವೆ ಎಂದು ಹೇಳುವೆ ಅದರಸ್ಟು ಎಂದು ನಾನು.
ಅಳೆಯಲಾಗದ ಪ್ರೀತಿಯ ನೀ ಅಳೆಯುವೆಯ,
ಉಸಿರ ನೀಡುವ ಪ್ರೀತಿಯ ನೀ ಬಿಟ್ಟು ಹೋಗುವೆಯ,
ಬಂದನದಲ್ಲಿ ಇರಿಸಿರುವೆ ನಾ ನಿನ್ನ,
ಹೃದಯವೆಂಬ
ಕೋಟೆಯ ಒಡೆದು ನೀ ಹೋಗುವೆಯ ಚಿನ್ನ?
ಆಗಸದಷ್ಟು ಪ್ರೀತಿಯ ಹೊತ್ತು ಕಾದಿರುವೆ,
ಉಸಿರು ನಿಲ್ಲುವವರೆಗೂ ನಿನ್ನೊಂದಿಗೆ ನಾನಿರುವೆ,
ಪ್ರೀತಿ ಇಂದ ನಾ ಇಲ್ಲಿ ಇರುವೆ,
ನಿನ್ನ ಮನದಲ್ಲಿ ಕುಳಿತು ನಾ ನಲಿಯುತ್ತಿರುವೆ.

- ವಿನುತ ಕಿರಣ್ ಗೌಡ

23 Nov 2015, 03:03 am
Download App from Playstore: