ಓ ಮರುಳೆ
ಎಂಥಕನಮ್ಮಿ ಇದು ಏನ್ ಕನಮ್ಮಿ ಇದು
ಮುದಿ ವಯಸ್ಸಾಯಿತೆ ಮುರುಕಲಾಯಿತೆ ದೇಹ
ಹದಿವಯಸ್ಸಾಗೆ ಅಟ್ಟಹಾಸದಿ ಮೆರೆದು
ಕಾಣದಂತಾಯಿತೆ ಕಣ್ಣು ಪ್ರೀತಿಸುವ ಜನರನ್ನ
ನನ್ನವರು ತನ್ನವರೆನ್ನೊ ಕರುಳಿಲ್ಲದಂತಾಗಿ
ಮದ ತುಂಬಿತೋ ಮನದಲ್ಲಿ ಮದ ತುಂಬಿತೋ
ಹಣದ ಭೂತ ಬಡಿದು ಹಣೆಬರಹವು ಹಾಳಾಯ್ತು
ದರ್ಜನರ ಸಂಗದಿಂದ ದೂರವಾಯಿತೋ ಧ್ವನಿಯು
ತನ್ನವರಿಗೆಲ್ಲ ಬೇಸರವಾಗಿ
ಹೊತ್ತ ಭೂಮಿಗೆ ಇಂದು ಹೊರೆಯಾಯಿತೋ
ತಂದೆ ತಾಯಿಯನ್ನು ನೋಯಿಸಿದ ಈ ಜೀವ
ಮಸಣದ ಹಾದಿಯ ಹಿಡಿಯಿತು ಓ ಮರುಳೆ..
- Irayya Mathad
21 Nov 2015, 02:49 pm
Download App from Playstore: