ಆಟೋ ರಾಜ
ಆಟೋ ಬಂತೊಂದು ಆಟೋ
ಯಾವೂರ ಆಟೋ
ಬೆಂಗಳೂರಿನ ಆಟೋ
ಕಲ್ಲು ಮರಳು ಏರಿತು
ಸೊಂದಿಗೊಂದಿ ತೂರಿತು
ಕಾರುಗಳನ್ನು ಹಿಂದೆ ಹಾಕಿತು
ಪೊಂ ಪೊಂ ಹಾರ್ನ್ ಮಾಡಿತು
ಎಂಥಹ ಟ್ರಾಫಿಕ್ ಇದ್ರೂನು
ಜೋರಾಗಿ ಹೊರಟೆ ಹೋಯಿತು
ಒಂದೇ ಚಕ್ರಕ್ಕೆ ಜಾಗ ಸಿಕ್ಕಿದರಾಯ್ತು
ಅಲ್ಲೇ ಆಟೋ ಮುಂದೆ ಹೋಯ್ತು
ಆಟೋ ಪ್ರಯಾಣ ಅಂದ್ರೆ ಆಯ್ತು
ಚಾಲಕನ ಕೈಗೆ ಪ್ರಾಣ ಕೊಟ್ಟಹ್ಯಾಂಗ್ ಆಯ್ತು
ಭೀತಿಲಿ ಸುಮ್ಮನೆ ಕೂತಿರಬೇಕು
ಅವನು ಹೇಳಿದಷ್ಟು ಬಿಲ್ ತೆರಬೇಕು
ನಾವ್ ಹೋಗೋ ಜಾಗಕ್ಕೆ ಬರೋದಿಲ್ಲ ಯಾರೂನು
ಆಟೋ ಹೋಗೋ ಜಾಗಕ್ಕೆ ಹೋಗ್ಬೇಕು ನಾವೂನು
ಬಸುರಿಯರಿಗೆ ಹೆರಿಗೆ ಆಗೋಯ್ತು
ಹಲವರಿಗೆ ಹೃದಯ ಬಡಿತ ನಿಂತೇ ಹೋಯಿತು
ಸೂರ್ಯ ಮುಳುಗಿದರೆ ಮೀಟರ್ ಡಬಲ್
ಬರೋದೆ ಇಲ್ಲ ಕರೆದರೆ ಸಿಂಗಲ್
ಅದ್ರೂನು ಅದೇ ನಮ್ಮ ನೆಚ್ಚಿನ ಸಂಗಾತಿ
ಮೂರೇ ಚಕ್ರದ ಮಾಯಗಾತಿ
- ಘಾಟ್ vidya
16 Nov 2015, 06:11 pm
Download App from Playstore: