ಯಾರು ಈ ಪ್ರೀತಿ ಗೆಲ್ಲುವವರು.
ಯಾರೋ ಯಾರೋ ಈ ಪ್ರೀತಿ ಗೆಲ್ಲುವವರು
ಮನದಾಳದಲ್ಲಿ ನಿಂತು ಕೂಗಿ ಬಂತು ಪ್ರೀತಿ
ಕಣ್ಣ ರೆಪ್ಪೆ ಮಿಟುಕಿ ಕಾಡಿತು ನನ್ನ ಪ್ರೀತಿ
ಹೃದಯ ಬಡಿತ ಮೀರಿ ಪ್ರೀತಿ ಮಿಡಿತ ಮೀಟಿ
ಅರಿಯದ ಮನಸ್ಸಿನಲ್ಲಿ ಮನೆಮಾಡಿ ನಿಂತ ಕಳ್ಳಿ
ಬಂಗಾರದೆಲೆಯ ಮೇಲೆ ಚಿತ್ತಾರ ಬಿಡಿಸಿದವಳೆ
ಹೊನ್ನಿನ ಕಿರಣ ಸೂಸಿ ಮನವೆಲ್ಲ ತಣಿಸಿ ನಿಂದೆ
ಕನಸಲ್ಲಿ ಕನ್ನ ಹಾಕಿ ಹೃದಯಕ್ಕೆ ಬಣ್ಣ ಹಚ್ಚಿ
ಮುತ್ತಿನ ಮಣಿಯಂತೆ ಪ್ರೀತಿಯ ಮುತ್ತ ತಂದೆ
ಸವಿಮಾತನಾಡಿ ನಿಂದೆ ನನ್ನುಸಿರಲಿ ಬೆರೆತು ಹೋದೆ
ಕರುನಾಡ ಮಣ್ಣಿನಲಿ ಕನ್ನಡದ ಹಿರಿಮೆ ತಂದೆ
ಗಂಧದ ಗುಡಿಯಲ್ಲಿ ಸೌಂದರ್ಯ ದೇವಿಯಾದೆ
- Irayya Mathad
04 Nov 2015, 01:34 am
Download App from Playstore: