ಕರುಣೆಯ ಕಡಲು ಕನ್ನಡ

ಕನ್ನಡ ಇದು ಕನ್ನಡ ನರನಾಡಿಯಲ್ಲೂ ಕನ್ನಡ ನನ್ನುಸಿರಿನಲ್ಲೂ ಕನ್ನಡ
ಬೆಳೆ ಸಿರಿಯಲ್ಲೂ ಕನ್ನಡ ನಡೆನುಡಿಯಲ್ಲೂ ಕನ್ನಡ

ವಿಷವನ್ನರಗಿಸಿ ಅಮೃತ ನೀಡೊ ಮಾತೆ ಮಧುರ ಕನ್ನಡ
ಜಾತಿ ಮತಗಳ ಮೀರಿ ನಡೆಯುವ ಪ್ರೀತಿ ಸ್ನೇಹದ ಕಂಕಣ ಬೆಸೆಯುವ ಒಂದೇ ಮತವು ಕನ್ನಡ

ಉಸಿರ ಉಸಿರಲಿ ನೀತಿ ಕಲಿಸುವ ನನ್ನ ನುಡಿಯೆ ಕನ್ನಡ
ಸುಮಧುರ ವಾಣಿಯ ಮುದವನು ನೀಡುವ ಸವಿನುಡಿಯೆ ಕನ್ನಡ

ಮೈಮನ ಮರೆಯಿಸಿ ಮನವನು ಪುಳಕಿಸಿ ನಾಕವ ತೋರಿಸೊ ಕನ್ನಡ
ಅಂದದ ನಾಡಿದು ಚೆಂದದ ಬೀಡಿದು ಗಂಧದ ಗುಡಿಯಿದು ಕನ್ನಡ

ಶಾಂತಿ ಸೌಹಾರ್ದ ಪ್ರೀತಿಗೆ ಮುನ್ನುಡಿ ಬರೆದಿಹ ಕನ್ನಡ
ಶರಣ ದಾಸರ ಹಿತವಚನಕ್ಕೆ ಮೇರು ನುಡಿಯೆ ಕನ್ನಡ

ಭೂದೇವಿಯ ಸೌಂದರ್ಯಕ್ಕೆ ಹೊನ್ನಿನ ಮುಕುಟವೆ ಕನ್ನಡ
ಅಲಂಕಾರದಿ ತ್ರಿಪದಿ ಷಟ್ಪದಿ ಪದಗಳ ರಾಶಿಯೇ ಕನ್ನಡ

ಅನ್ಯರೆನ್ನದೆ ಅಂಗುಲ ನೀಡಿ ತಲೆ ಕಾಯುವುದು ಕನ್ನಡ
ಸಿರಿತನವೆಂಬುದು ಮನದಿಂದರಿತು ಬೆರೆತು ಬಾಳುವ ಕನ್ನಡ

ಕಪ್ಪು ಮಣ್ಣಿನ ಕಬ್ಬಿನ ರಾಶಿಯ ಕರುಣೆಯ ಮೂರ್ತಿಯು ಕನ್ನಡ
ಸಾವಿನಲ್ಲಿಯೂ ನೋವಿನಲ್ಲಿಯೂ ಒಳಿತನು ಬಯಸುವ ಕನ್ನಡ

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಜೈ ಕರ್ನಾಟಕ ಮಾತೆ








- Irayya Mathad

03 Nov 2015, 12:18 am
Download App from Playstore: