ಚಾಟ್ಸ್ ಚಿಟ್ಟೆಗಳು
ಓ ತಳ್ಕಂಬಳ್ಕ ನೋಡೋ ಮಗಾ
ಹೇಳೊರಿಲ್ಲ ಕೇಳೊರಿಲ್ಲ ಮಾಡ್ತಾರಲ್ಲ ಮೋಡಿಯನ್ನ
ಅರೆಬರೆ ಚಡ್ಡಿ ಹಾಕ್ತಾರಲ್ಲ ಹಾಳಾಗೊಯ್ತು ಸಂಸ್ಕೃತಿಯಲ್ಲ ಯಾಕೋ ಮಗಾ ಕುರಿಯಂಗೆ ಮಾಡ್ಬಟ್ರಲ್ಲ
ಮೈತುಂಬ ಮೇಕಪ್ ಹಾಕಿ ನನ್ನೆ ನೋಡು ಅಂತಾರಲ್ಲ
ಕಣ್ಣಿನ ತುಂಬ ಕಾಡ್ಗೆ ಹಚ್ಚಿ ದೃಷ್ಟಿ ಬೊಟ್ಟು ಇಡ್ತಾರಲ್ಲ
ಹುಡುಗುರ ಮನಸ್ಸು ಸೆಳೆಯೊಕಿನ್ನು ಏನೇನೋ ಮಾಡ್ತಾರಲ್ಲ
ರಾತ್ರಿಯಾದ್ರು ಕಣ್ಮುಚ್ಚಲ್ಲ ಮೋಬೈಲ್ ಲೈಟು ಆಪಾಗೊಲ್ಲ
ಅಪ್ಪ ಅಮ್ಮಗೆ ಹೇಳ್ತಾರಲ್ಲ ಕಾಗೆ ಹಾರಿಸೊ ಮಾತುಗಳನ್ನ
ದಿನಾವೆಲ್ಲಾ ಕೊಲ್ತಾರಲ್ಲ ವಾಟ್ಸಪ್ ಅನ್ನೋ ಚಾಟ್ ಬೂತಿಂದ
ಗೆಜ್ಜೆ ಇಲ್ಲದ ಹೆಜ್ಜೆ ಇಟ್ಟು ಡೇಟಿಂಗ್ ಅಂತಾ ಹೋಗ್ತಾರಲ್ಲ
ಪಾಕೆಟ್ ಮನಿಗೆ ಕನ್ನ ಹಾಕಿ ಕೈಯಲ್ಲಿ ಚಂಬು ಇಡ್ತಾರಲ್ಲ
ಖಾಲಿಯಾದ ಪಾಕೆಟ್ ನೋಡಿ ಪಕ್ಕದ ಕುರಿಗೆ ಕಾಳಾಕ್ತಾರೆ
ಯಾಕೋ ಮಾಗಾ ಕುರಿಯಂಗೆ ಮಾಡ್ಬಿಟ್ರಲ್ಲ
- Irayya Mathad
29 Oct 2015, 06:32 am
Download App from Playstore: