ಕಣ್ಣೋಟದ ಕಣ್ಮನಿ
ಮಿರಿ ಮಿರಿ ಮಿಂಚುತ ತಂಗಾಳಿ ಚಿಮ್ಮುತ
ನನ್ನೆದೆ ತೋಟಕೆ ನೀ ಬಂದೆ
ನೂರೊಂದು ಆಸೆ ಚಿಗುರುತಿದೆ ಈಗ
ತೋಳಲ್ಲಿ ನೀ ನನ್ನ ಸೋಕಿದಾಗ
ಮನಸುಗಳ ತುಡಿತ ಹೃದಯಗಳ ಬಡಿತ
ಒಂದಾಗಿ ಗೀಚಿದೆ ಹೊಸ ಕವಿತೆಯ
ಇರುಳಿನ ಇಬ್ಬನಿ ತಾಕುತ ಮನಕೆ
ಅರಳುತಿದೆ ತಾವರೆ ಮೊಗದಲ್ಲಿ ಕಾಣೆ
ಗಂಧದ ನಾಡಲ್ಲಿ ಗಿರಿ ಕನ್ಯೆ ನೀನಾಗಿ
ಮಲೆನಾಡ ಮುಡಿಗೆ ಮಲ್ಲಿಗೆ ಹೂವಾದೆ
ಚೆಲುವಿನ ಲೋಕಕೆ ಚಿನ್ನದ ಗೊಂಬೆಯಾಗಿ
ಲಗ್ಗೆ ಇಟ್ಟೆಯಾ ನನ್ನ ಬಾಳ ಸಂಗಾತಿ ನೀನಾಗಿ....
- Irayya Mathad
27 Oct 2015, 05:07 pm
Download App from Playstore: