ಮಳೆಯಲ್ಲಿ ತಣಿದ ಮನ
ದೇವರ ವರವೋ ಪೂರ್ವದ ಪುಣ್ಯವೋ
ತಣಿದಾ ಮನವು ಮಳೆಯಲ್ಲಿ ನೆನೆದು !! ಪ !!
ಕಾನನದಂಚಿಗೆ ಮಿಂಚಿನ ಓಟವೋ
ಸಿಡಿಲಿನ ಆರ್ಭಟವೋ ನನ್ನೆದೆ ಗೂಡಿನಲ್ಲಿ
ಪುಟಿದಾ ಮಳೆ ಹನಿಯು ನನ್ನನೆ ಸೋಕಲು
ಧಾವಿಸಿ ಬರುತಿಹ ಗುಡುಗಿನ ಸರಮಾಲೆ
ಚಾಮರ ಬೀಸುತ ತಣ್ಣೀರೆರೆಚುತ
ನಾಚಿದೆ ತಂಗಾಳಿ ನಸು ನಗೆ ಬೀರುತ
ವನ್ಯಕುಲ ಜೀವಿಯೋ ಹಕ್ಕಿಯ ರಾಗವೋ
ಮೇಘದ ಸಂದೇಶ ತಂದಿದೆ ಸಂತೋಷ
ಪುಳಕಿತ ನನ್ನ ಮನವು ಕುಣಿದಾಡಿದೆ ಈಗ
ಬೊಂಬೆಯಾಟ ಆಡಿಸುವ ಸೂತ್ರಧಾರಿ ನೀನಾದೆ
ನಟಿಸುವ ಪಾತ್ರಧಾರಿ ನಾನಾಗಿಹೆನು
ಕಳೆದು ಹೋದೆ ನಾನು ಕಲ್ಪನೆಯ ಲೋಕದಲ್ಲಿ.....
- Irayya Mathad
24 Oct 2015, 09:21 am
Download App from Playstore: