ಕಲಹವೇತಕೆ ?
ಹಿಂದು -ಮುಸ್ಲಿಂ ಕಲಹವೇತಕೆ
ಹೊಂದಿ ಬಾಳಬಾರದೇ
ಮೇಲು -ಕೀಳು ಜಗಳವೇತಕೆ
ಮನುಜನಾಗಿರಬಾರದೇ
ರಕ್ತ ಹರಿಸುತ ದ್ವೇಷ ಬೆಳೆಸುತ
ಧರ್ಮ ರಕ್ಷಣೆ ನ್ಯಾಯವೇ
ಮತಾಂಧತೆಯ ಗುಲಾಮನಾಗದೆ
ಮಾನವತೆಯ ಸಾರಬಾರದೇ
ಸರ್ವ ಧರ್ಮದ ಶಾಂತಿಯ ಸಾರಿದ
ಸರ್ವ ಶ್ರೇಷ್ಠ ಭೂಮಿ ನಮ್ಮದು
ಹಸಿರು -ಕೇಸರಿ ಭೇದವೇತಕೆ
ಉಸಿರು ಭಾರತವೆನ್ನಲಿ
ಪುಣ್ಯ ಮಣ್ಣಿನ ಪ್ರಜೆಗಳಾಗುತ
ಬಾ ..ಬೆರೆತು ಬಾಳುವ ಗೆಳೆಯನೆ ..!!
✒ಸಿರಾಜ್ ಗಡಿಯಾರ್
- ಸಿರಾಜ್
23 Oct 2015, 07:51 pm
Download App from Playstore: