ಪೇಟೆ-ಹಳ್ಳಿ

ಹಾರುತಿಹವು ಹಕ್ಕಿಗಳು ಸ್ವತಂತ್ರವಾಗಿ
ಹಳ್ಳಿಯ ಆಗಸದಲ್ಲಿ
ನರಳುತಿದೆ ಹಕ್ಕಿಗಳು ಪೇಟೆಯ
ಚಿನ್ನದ ಪಂಜರದಲಿ

ಗದ್ದೆಯ ಮೇಲೆ ಖುಷಿಯ ಹೊಳೆ
ರೋಡಿನ ಮೇಲೆ ಗಾಡಿಗಳ ಹೊಗೆ
ಹಳ್ಳೀಲಿ ಪ್ರಶಾಂತದ ಸಿಹಿಗಾಳಿ
ಪೇಟೇಲಿ ಮಾಲಿನ್ಯದ ಹಾವಳಿ

ನಗರದಲಿಹುದು ಹೆಚ್ಚಿನ ಅವಸರ
ಹಳ್ಳಿಯಲಿ ಸುಂದರ ಸುಮಧುರ ಪರಿಸರ
ಪೇಟೆಯಲ್ಲಿ ಅರ್ಥವಾಗದ ಮಾರ್ಗ
ಹಳ್ಳಿಯ ಪ್ರತಿ ಬೀದಿಯಲೂ ನಗುವಿನ ಸ್ವರ್ಗ

ನಗುತಿವೆ ಮುದ್ದೆ ತಿಂದ ಬಾಯಿಗಳು
ನರಳುತಿವೆ ಫಿಜ್ಜಾ ತಿಂದ ಬಾಡಿಗಳು
ಉಸಿರಿನ ಉಸಿರೇ ಅಲ್ಲಿಯ ಹಸಿರು
ಹೊಗೆಗೆ ಕಟ್ಟುವುದು ಇಲ್ಲಿಯ ಉಸಿರು

- shiva

22 Oct 2015, 03:07 pm
Download App from Playstore: