ಬ್ರಹ್ಮಾಂಡ ಪಾಲಕ
ಬ್ರಹ್ಮ ರೂಪ ಬ್ರಹ್ಮ ಕಮಲ ಬ್ರಹ್ಮ ದೇವನ ಪಿತ
ಹರಿ ಓಂ ನಾರಾಯಣನೆ ಕಾಪಾಡು ಕರುಣಾಳು ಜನಕನೆ !!ಪ!!
ಆದಿಯಿಲ್ಲದ ಅಂತ್ಯವಿಲ್ಲದ ಅನಂತಸ್ವರೂಪನೆ
ಸಕಲ ಜೀವ ರಾಶಿ ಕುಲದ ಜೀವದಾತನೆ
ಕಾಪಾಡು ಎನ್ನನೆ ನೀನು
ಅಂಕೆ ಇಲ್ಲದ ಸಂಖ್ಯೆ ಇಲ್ಲದ ಮಹಾಮಹಿಮನೆ
ಸರ್ವರೂಪನು ಸರ್ವಶಕ್ತನು ಸರ್ವಂತರ್ಯಾಮಿಯೆ
ಕಾಪಾಡು ಎನ್ನನೆ ನೀನು
ಬೀಸು ಗಾಳಿಗೆ ದಿಕ್ಕು ತೋರಿಸೊ ದಿಕ್ಸೂಚಕನೆ
ಭೋರ್ಗರೆವ ಕಡಲ ಅಲೆಗೆ ಸೂತ್ರಧಾರನೆ
ಅಗ್ನಿ ವಾಯು ವರುಣ ದೇವರ ಅವತಾರನೆ
ಏನು ಮಾಡಲು ಅರಿಯನು ನಾ ಈ ಜಗದಲಿ
ಕಣ್ತೆರೆದು ನೋಡಲು ಬರಿ ಕತ್ತಲೆ ಮನೆ
ಕರುಣಿಸು ಜ್ಞಾನದ ಬೆಳಕನ್ನು
- Irayya Mathad
22 Oct 2015, 07:33 am
Download App from Playstore: