ಚೆಲುವೆಗೆ ಕಿವಿಮಾತು


ನೀ ಚೆಲುವೆಯೆಂದು ಬಿಗಬೇಡ
ಚೆಲುವಿನಿಂದ ಅಲೆಯಲಾಗುವುದಿಲ್ಲ ಭಾವನೆಗಳ
ಅರಿತರೆ ನೀ ಚೆಲುವಿನಡಿಯಲ್ಲಿರುವ ಭಾವನೆಗಳ
ಒಳಿತು ನಿನಗೆ ಜೀವನದ ಹಾದಿಯಲ್ಲಿ
ಕುರೂಪಿ ನಾ ನಾಗಿರಬಹುದು
ನನ್ನ ಭಾವನೆ ಕುರೂಪಿಯಲ್ಲ
ನೀ ನನ್ನ ಅರಿಯದಿದ್ದರು ಚಿಂತೆಯಿಲ್ಲ
ನಿನ್ನ ಅರಿತವರ ನೊಯಿಸಬೆಡ

ನೀ ಹೇಳಬಹುದು ನೀನು ಕುರೂಪಿ
ನೀ ನೋಡು ನಿನ್ನ ಮುಖವನ್ನ ಕನ್ನಡಿಯಲ್ಲಿ
ಅಷ್ಟೆ ಸಾಕು ಕನ್ನಡಿಯಂತ ಮನಸ್ಸು ಒಡೆದು ನುಚ್ಚುನೂರಾಗಲು
ಒಡೆದ ಮನಸ್ಸು ಉದುರಿದ ಹೂ
ಮತ್ತೆ ಒಂದಾಗಲು ಸಾಧ್ಯವಿಲ್ಲ

ನೀನು ನಿನ್ನ ಚೆಲುವಿಗಿಂತ ಜೀವನದ ಚೆಲುವನ್ನ ಕಾಪಡಿಕೊ
ನಿನ್ನ ಒಂದು ಮಾತು ನಿನ್ನ ಜೀವನವನ್ನು ರೂಪಿಸಬಹುದು
ಹಾಗೆ ಒಂದು ಮಾತು ನಿನ್ನ ಜೀವನವನ್ನು ಮುಗಿಸಬಹುದು
ಮತ್ತೆ ಮತ್ತೆ ಹೇಳುತ್ತೆನೆ ನಿನಗೆ
ಅರಿಯಬೆಕು ನೀನು ನಿನ್ನ
ಅಳೆಯಬೇಕು ನಿನ್ನ ಜೀವನವನ್ನ

ಚೆಲುವು ನಿನಗಿರಬಹುದು
ನಿನ್ನ ಚೆಲುವೆ ನಿನಗೆ ಮುಳ್ಳಾಗಬಹುದು
ನೀನು ನಿನಗೆ ಮುಳ್ಳಾಗಬೆಡ
ಇತರರ ನೊವಿನ ಮುಳ್ಳನ್ನು ತೆಗೆಯುವ ಮುಳ್ಳಾಗು
ಚೆಲುವೆ ನಿನ್ನ ಜೇನಿನಂತ ಜೀವನ
ಚೆಲುವಾಗಿರಲಿ ಚೆಲುವಾಗಿರಲಿ

ಇಂತಿ ನಿನ್ನ
ಗಣನಾಥ

- ಗಣನಾಥ

17 Nov 2014, 12:35 pm
Download App from Playstore: