ಬತ್ತಳಿಕೆ,,,,,
ಕೊನೆ ಗಿರಾಕಿ....
ನನ್ನ ತಲೆಯ ಬತ್ತಳಿಕೆಯಲ್ಲಿ
ಅನೇಕ ಬಾಣಗಳು ಇರಬಹುದು
ಯುದ್ಧದ ಸಂದರ್ಭದಲ್ಲಿ
ಪ್ರಯೋಗಿಸಿದರೆ ಗುರಿಯನ್ನು
ತಲುಪುವ ಭರವಸೆ ಇಮ್ಮಡಿಸುತ್ತದೆ.
ವಿದರ್ಭದಲ್ಲಿ ವಿನಿಯೋಗಿಸಿದರೆ
ಸಂದರ್ಭ ಕೇಡು ಮಾಡಬಹುದಾಲ್ಲವೆ
ಬತ್ತಳಿಕೆ ತುಂಬುವ ಕಾರ್ಯ ಸಾಗುತ್ತಿದೆ
ಪುಟಗಳ ಪುಸ್ತಕದಿಂದಲ್ಲ
ಪೃಥ್ವಿಯ ಅನೇಕ ಪುಟಗಳಿಂದ.
ಒಂದಾಂತು ಹೊಂದಿಕೆಯ ವಿಷಯ
ಕೇಡಂತು ನಮ್ಮಿಂದಾದರು
ಪೃಥ್ವಿಯಿಂದಲ್ಲ
ಹಾಸಿಗೆಯಲ್ಲೆ ಅರುಳುತ್ತಿದೆ
ಕೇಡಿನ ಗಂಟ್ಟು
ವಂಶವೆಂಬ ಗುಟ್ಟು
ಅದರೆ ಹೂ ಅರಳಿಸಿ ಸುವಾಸನೆ ಪಸರಿಸಿದರಾಗದೆ.
ಆಗಬಹುದೆನೊ ಪ್ರಯತ್ನಿಸಬೇಕಷ್ಟೆ
ನಾವೆಲ್ಲ ಮೊದಲ ಗಿರಾಕಿಯಾಗಿ......
# ಈಶ,ಎಂ,ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
18 Oct 2015, 10:46 am
Download App from Playstore: