ಅಮ್ಮ ನನ್ನಮ್ಮ

ತನ್ನ ಜೀವವ ಸವೆಸಿ
ನನ್ನ ದೇಹವ ಬೆಳೆಸಿ
ಸಾಕಿ ಸಲುಹಿದವಳು ನನ್ನಮ್ಮ

ತಾನು ಹಸಿವನು ದಹಿಸಿ
ನನಗೆ ಅನ್ನವ ಉಣಿಸಿ
ಸಾಕಿ ಸಲುಹಿದಳು ನನ್ನಮ್ಮ

ಪೈಸೆಪೈಸೆಯನು ಕೂಡಿಟ್ಟು
ನನಗೆ ರೂಪಾಯಿನು ಕೊಟ್ಟು
ಸಾಕಿ ಸಲುಹಿದವಳು ನನ್ನಮ್ಮ

ತಾನು ಹರಕಲು ಸೀರೆಯನುಟ್ಟು
ನನಗೆ ಹೊಸ ಬಟ್ಟೆಯಕೊಟ್ಟು
ಸಾಕಿ ಸಲುಹಿದವಳು ನನ್ನಮ್ಮ

ತಾನು ನೋವನು ಸಹಿಸಿ
ನನಗೆ ನನಗೆ ನಗುವನು ತರಿಸಿ
ಸಾಕಿ ಸಲುಹಿದಳು ನನ್ನಮ್ಮ

ತನ್ನ ಆಸೆಗಳ ಒಣಗಿಸಿ
ನನ್ನ ಆಸೆಗಳ ಚಿಗುರಿಸಿ
ಸಾಕಿ ಸಲುಹಿದವಳು ನನ್ನಮ್ಮ

ತಾನು ಬದುಕಿರುವವರೆಗೂ
ತನ್ನ ಕಂದನ ಪ್ರೀತಿಸುವ
ಭೂಮಿಯ ಮೇಲೆ ವಾಸಿಸುವ
ಏಕೈಕ ಜೀವಿ ಎಂದರೆ "ಅಮ್ಮ"

"ತಾಯಿ ದೇವರ ಮುಂದೆ
ಎಲ್ಲಾ ದೇವರು ಹಿಂದೆ "

- ಚೇತನ್ ಬಿ ಸಿ

18 Oct 2015, 01:51 am
Download App from Playstore: