ನೆನಪಿದೆ, ,,,

ನೆನಪಿದೆ,,,,,

ನೆನಪಿದೆ , ಹಣ್ಣೆಲೆ ಉದುರಿ
ಗಾಳಿಯಲ್ಲಿ ತವಳುತ್ತ
ಕೊನೆ ಉಸಿರೆಳೆದುಕೊಳ್ಳುವಾಗ
ಬೋಳಾದ ಮರಗಳ ದುಃಖವ .

ನೆನಪಿದೆ , ಮರ ಕೆತ್ತಿ ನೇಗಿಲ
ಮಾಡಿ ಕಲ್ಲು ಮಣ್ಣುಗಳ ಜೊತೆ
ಅಲಾಂಗಿಸಿ ಅಳುವಾಗ ಕಣ್ಣೀರು
ಮಳೆಯಂತೆ ಬಂದ ನಗು ಮುಖವ.

ನೆನಪಿದೆ, ಶ್ರಮದ ಬೆವರು
ನನ್ನೂರಿನ ಸುಗಂಧ ವಾಸನೆ.
ಗುಡಿಸಲಲ್ಲಿ ಇಣುಕುವ ಮಳೆ ಹನಿ
ಪಾತ್ರೆಯಲ್ಲಿ ಧುಮುಕಿ ಸಂಗೀತವಾಗಿದ್ದು.

ನೆನಪಿದೆ , ಕತ್ತಿ ಮಸೆವ ಕಲ್ಲು
ಗೆಯುವ ಕೈಗಳ ಯಜಮಾನ.
ಗೋಣಿಚೀಲದ ದವಸ
ದಿನ ನಿತ್ಯ ನಮಗೆ ಸಾಹುಕಾರ.

# ಈಶ,ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

17 Oct 2015, 08:54 pm
Download App from Playstore: