ಕಲಿಯುಗ ಕಾಲ ಕೆಟ್ಟತಿ!

ಕಲಿಯುಗ ಕಾಲ ಕೆಟ್ಟತಿ
ಸಂಸ್ಕೃತಿಯೆಂಬುದು ಮರೇತೈತಿ
ಹೆಣ್ಣು ಹೋಗಿ ಗಂಡಾಗೈತಿ
ಗಂಡಿಗೆ ದಿಕ್ಕು ತಪ್ಪಿ ಹೋಗೈತಿ !

ತಲೆಮೇಲಿನ ಸೆರಗ ಹೋಗೈತಿ
ಕ್ಯಾಪು - ಚಸ್ಮಾ ಅಂತ ಬಂದೈತಿ !!

ಹಣಸಿಣ ಬೊಟ್ಟು ಹೋಗೈತಿ
ಬದಲಾಗಿ ಟ್ಯಾಟೂ ಬಂದೈತಿ !!!

ಕುಂಕುಮ ಬೊಟ್ಟು ಹೋಗೈತಿ
ಮಿಂಚಿನ ಟಿಕಳಿ ಕಾಣತೈತಿ !!!!

ಸೀರಿ - ಕುಬುಸವೆಲ್ಲ ಹೋಗೈತಿ
ಜೀನ್ಸುಪ್ಯಾಂಟುಗಳ ಕಾಲೈತಿ !!!!!

ಉದ್ದುದ್ದ ಸೆರಗ ಮರೇತೈತಿ
ಎಳೆಯುವ ಬ್ಯಾಗು ಬಂದೈತಿ !!!!!!

ಅರಿಸಿಣ-ಕುಂಕುಮ ಹೋಗೈತಿ
ಸ್ನೋ - ಪೌಡರ್ ಹೋಳಿತೈತಿ !!!!!!!

ಬಸ್ಸು ಹತ್ತುವುದು ಮರೇತೈತಿ
ಸ್ಕೂಟಿ ಹಿಡಿಯುದು ಕಾಣತೈತಿ !!!!!!!!

ಹಾಡು ಹೇಳುವುದು ಹೋಗೈತಿ
ಕಮೆಂಟ ಮಾಡುವುದು ಹೇಚೈತಿ !!!!!!!!!

ಕಥೆಹೇಳುವುದು ಮರೇತೈತಿ
ಚಾಟ್ - ಗೀಟ್ ಅಂತ ಬಂದೈತಿ !!!!!!!!!!

ಕನ್ನಡ ಮಾತಡೊದ ಹೋಗೈತಿ
ಟಸು - ಪುಸು ಇಂಗ್ಲೀಷ್ ಬಂದೈತಿ !!!!!!!!!!!

ಭಾರತ ಸಂಸ್ಕೃತಿ ಮರೇತೈತಿ
ಪಾರೆನ ಪ್ಯಾಶನ ಹೇಚೈತಿ !!!!!!!!!!!!

- BIRESH KOTI

13 Oct 2015, 04:30 pm
Download App from Playstore: