ಲಕ್ಷ್ಯಕೊಡಬಾರದೆ?
ಬೆಂಕಿ ಹತ್ತುತ್ತಿರಲು
ಕಾಡು ಉರಿಯುತ್ತಿರಲು
ವನ್ಯ ಮೃಗಗಳಿಕ್ಕಟ್ಟಿನಲ್ಲಿರಲು
ಸ್ವಲ್ಪ ಇತ್ತಕಡೆ ಲಕ್ಷ್ಯಕೊಡಬಾರದೆ?
ಹಸಿರು ನಾಶವಾಗುತ್ತಿರಲು
ಕಪ್ಪು ವಕ್ಕರಿಸುತ್ತಿರಲು
ಮೃಗಗಳಿಗೆ ದಿಕ್ಕು ತಪ್ಪಿರಲು
ಸ್ವಲ್ಪ ಅವುಗಳು ಶೋಕಕಥೆ ಆಲಿಸಬಾರದೆ?
ಕಪ್ಪು ನದಿಯು ಹರಿಯುತ್ತಿರಲು
ಪ್ಯಾಕ್ಟಿರಿಗಳು ರಸಾಯನಿಕಗಳ ವಿಸರ್ಜಿಸುತ್ತಿರಲು
ಜಲಚರಗಳು ಎದ್ದೆದ್ದು ಬೀಳುತ್ತಿರಲು
ಸ್ವಲ್ಪ ಈ ಬಗ್ಗೆ ಯೋಚಿಸಬಾರದೇ?
--ಕೋಟಿ ಬೀರೇಶ
- BIRESH KOTI
11 Oct 2015, 01:30 pm
Download App from Playstore: