ಕೊನೆ ಗಿರಾಕಿ...2
-- ಕೊನೆ ಗಿರಾಕಿ
ಸತ್ತವತಿಯ ಚರ್ಮದಲ್ಲಿ ಡಂಗುರ ಮಾಡಿ
ನಮ್ಮದೇ ರಾಗಕ್ಕೆ ಹೊಂದಿಸಿ ಹಾಡಿ
ಸತ್ತ ಚರ್ಮ ಮತ್ತೆ ಇಂಪಂತೆ ಹುಟ್ಟಿ
ಅರಿವಿಲ್ಲದೆಯೇ ಸಾಯುತ್ತದೆ
ಆದರೆ ಕಂಪನ ಕಂಪಿಸಿ.
ಇದಂತ್ತೆ ಇದ್ದು ಎದ್ದು ಹೋಗದ ಹೋಗಲೋಲ್ಲದ
ಋಣವಂತೆ ಕಣದಲು ಕಾಯುವುದರಲ್ಲು
ಗಣಗಳ ಗುಂಪು ದೊಡ್ಡದಾಗಿರಲು
ಕಾರ್ಮೋಡದ ಕಪ್ಪು ಕುತ್ತಿಗೆಯ ಸಂಮುಖದಲ್ಲಿ.
ಗಾಳಿಪಟನು ದಾರದಿಂದ ಹಾರಿ ದೂರಹೋದಂತೆ
ಪಟದ ಹುಟ್ಟಿಗೆ ಕಾರಣ ಕಡ್ಡಿಗಳಂತೆ
ದಾರವು ಕಡ್ಡಿಯೋ ತೋರಣದ ಆಟವಷ್ಟೆ
ನೋಟದ ಆಂತರಿಕ ಕಣ್ಣುಗಳ ಜೊತೆಯಲ್ಲಿ .
ಇವೆಲ್ಲವೂ ಮುಂದು ಇನ್ನು ಮುಂದು
ಎಂದು ಮುಂದೆ ಮುಖಮಾಡಿ ನಡೆದರೆ
ಕೊನೆಯ ದಾರಿ ಮುದುಡಿ ಮುಪ್ಪಾಗಿ ಹೋದರೆ
ಇರುವರೆಲ್ಲರಲು ಕೊನೆಗಿರಾಕಿ ಯಾರು . ?
## ಈಶ,ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
10 Oct 2015, 07:45 pm
Download App from Playstore: