ಲೋಕದ ಎಲ್ಲವೂ

ಲೋಕದ ಎಲ್ಲವೂ
ನನ್ನ ಕಂಗೆಡಿಸಿವೆ ರೂಹೀ
ನಾನೀಗ ಕಾವ್ಯದ ಗರ್ಭ ಹೊಕ್ಕು
ಕವಿತೆಯಾಗಿ ಜೀವತಳೆಯಬೇಕು
ನನ್ನೆಲ್ಲಾ ಹಸಿ ಕನಸು
ಹುಸಿ-ಮುನಿಸಿಗೂ ನೀನೀಗಾ ತಾಯಾಗಬೇಕು

ಯಾ ರೂಹೀ
ನಾನೀಗ ನಿನ್ನೆದೆ ಕೂಸಾಗಬೇಕು
ಮತ್ತೆ ಮತ್ತೆ ರಚ್ಚೆ ಹಿಡಿದು ನಿನ್ನ ಕಾಡಬೇಕು

ಬಾ
ಅರೆಗಳಿಗೆ ಎದಿರುಗೊಳ್ಳು
ಕವಿತೆ ಕಾರುವ ನಿನ್ನ ಕಣ್ಣಿನಾಳದಿಂದ
ಕಾವ್ಯದ ಗರ್ಭ ಹೊಕ್ಕುತ್ತೇನೆ
ಲೋಕದ ಸೂತಕಗಳಾವು ತಾಗದಂತೆ
ನನ್ನ ಹಡೆದು ಆಡಿಸು

ಲೋಕದ ಕಾವು ತಾಗುವ ಮೊದಲೇ
ಕವಿತೆಯ ಗರ್ಭದೊಳಗೇ ನನಗೆ ಗೋರಿ ಕಟ್ಟಿಸು
ನಿನ್ನೆದೆಯ ಜಡವಾಗಿ ಉಸಿರಾಡಬಲ್ಲೆ ರೂಹೀ
ಕಾವ್ಯ ಕಾರುಣ್ಯದ ನಿನ್ನೆದೆಯಲ್ಲಿ
ನನ್ನ ಅಳಿವು-ಉಳಿವಿನ
ಸಹಿಯಾಗಬೇಕು..

- malappa

07 Oct 2015, 07:05 am
Download App from Playstore: