ಕೊನೆ ಗಿರಾಕಿ...

ಕೊನೆ ಗಿರಾಕಿ.....


ಬರವಣಿಗೆ ಎಂದು ಬರೆದ ಅನೇಕ ಪದ ಅಳಿಸಿವೆ.
ಬದುಕು ಎಂದು ಬರೆದ ಅನೇಕ ಪದ ಆಳಿವೆ.

ಬರೆಯುವಂತ ಲೇಖನಿಯ ಮುಳ್ಳು ಮುರಿದಿದೆ.
ಬರೆದ ಲೇಖನಿಯ ತುದಿ ಷಯಿಯಿಂದ ಚಿತ್ರಿಸಿವೆ.

ಬಿಳಿ ಕಾಗದದ ತುಂಬೆಲ್ಲ ಅನುಭವದ ಆಕಾರ.
ಪುಟ್ಟ ತಿರುಗಿಸಿ ನೋಡಿದಾಗಲೆ ಇನ್ನೇನೂ ಬೇಕೆನ್ನೂವ ಸಹಕಾರ.

ಬಿಳಿ ಕಾಗದ ನೋಟಾದಗ ಉಕ್ಕುವ ಖುಷಿ.
ನೋಟೇಲ್ಲ ಸುಣ್ಣವಾದಗ ಅದೇನೋ ಘಾಸಿ.

ಎಲ್ಲವುಗಳ ,ಎಲ್ಲದರ ಲೇಖನಿಯೇ..ಮನಸ್ಸು.
ಬರವಣಿಗೆಯೇ,ಬದುಕು.
ಕೊನೆ ಗಿರಾಕಿ ಅಕ್ಷರವೇ.....?.ಅನುಭವವೇ....?ಇಲ್ಲ ಕುರುವೇ...?

## ಈಶ,ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

06 Oct 2015, 02:02 pm
Download App from Playstore: