ನಾನೇನು ಕಡಿಮೆಯಿಲ್ಲ
ನನಗಿಂತ ನೀ ಮೇಲೆಂದು
ಬೀಗಬೇಡ ಗೆಳೆಯ....
ನಿನಗಿಂತ ನಾನೇನು
ಕಡಿಮೆಯಿಲ್ಲ......
ನೀ ಮಾತಿನ ರಾಜ್ಯದ
ಸರದಾರನಾದರೆ,,
ನಾನು ಮೌನ ಸಾಮ್ರಾಜ್ಯವ
ಆಳುವ ಮಹಾರಾಣಿ.....
ನೀ ತಿಂಗಳಿಗೊಮ್ಮೆ
ಪ್ರಕಾಶಿಸುವ ಚಂದ್ರನಾದರೆ,,
ನಾನು ಪ್ರತಿದಿನ
ಮಿನುಗುವ ನಕ್ಷತ್ರ.....
ನೀನು ಮೈ ಪುಳಕಿಸುವ
ಬಿಸಿ ಅಪ್ಪುಗೆಯಾದರೆ,,
ನಾ ಎಲ್ಲರನ್ನೂ ಸೆಳೆವ
ನಿಷೆಯೇರಿಸುವ ಕಣ್ಣೋಟ....
- ನಿಶಾ ರೂಪ
06 Oct 2015, 02:25 am
Download App from Playstore: