ಪರೋಪಕಾರಂ ಇಧಂ ಶರೀರಂ
ಮಾನವ ದೇಹ ಮಾಂಸದ ಕಣಜ
ತಿಳಿಯೊ ನೀನು ಮನುಜ..
ಜೀವನವೆಂಬ ಜಂಜಾಟದಲಿ
ದಯೆಯು ಇರಲಿ ಸಹಜ..||ಪ||
ಶ್ವಾಸ ನಿಂತಮೇಲೆ ಹ್ರದಯ ಕೊಟ್ಟರೆ ನಷ್ಟವೇನು ಮನುಜಾ..
ಇನ್ನೊಂದು ಜೀವಕೆ ಜೀವವಾಗುವೆ
ತೋರು ದಯೇ ಕರುಣಾ..
||ಪ||
ಪರರ ಮೊಗದಲಿ ನಯನವಾಗಲೀ ನಿನ್ನ ನೇತ್ರ ಮನುಜಾ ...
ಉಸಿರು ನಿಂತಮೇಲು ನೋಡಬಹುದು ನೀ ಈ ಪರಿಯಾ ಜಗವಾ...
||ಪ||
ನಿಸ್ವಾರ್ಥಥೆಯಲಿ ದಾನಮಾಡು ನೀ ಕಿಡ್ನಿಯೆಂಬ ಕಸುವಾ....
ಪರೊಪಕಾರಂ ಇಧಂ ಶರೀರಂ
ಎಂಬ ಮಂತ್ರ ಪಠಣ....
||ಪ||
- vikas ಅನುಭವಿ
27 Sep 2015, 07:40 am
Download App from Playstore: