ಒಂದೇ .....
ಒಂದೇ ......
ಸವಿಗಾನದ ರಾಗದಲಿ, ಸೂರ್ಯನ ನೋಟದಲಿ.
ಕಪ್ಪಿನಂತೆ ರಾತ್ರಿಯಲ್ಲಿ , ಪೃಥ್ವಿಯ ಕೂಸುನಲಿ.
ಅಮೃತದ ಗಾಳಿಯಲಿ , ಜೀವದನಿ ನೀರಿನಲಿ.
ಸರಿಸಮಾನ ಕಂಡ ಅಲ್ಲಾ,ಈಶ್ವರ, ಯೇಸು....
ಆಕಾರದ ಜೀವಿಗಳು ,ನೇಕಾರನ ಬಟ್ಟೆಗಳು.
ಮಕರಂದದ ಹನಿಗಳು, ಸಹಾಕಾರದ ಕೈಗಳು.
ಕಣ್ಣಿನ ಹನಿಗಳು ,ಕಾವ್ಯದ ಸಾಲುಗಳು.
ಸರಿಸಾಮನ ಕಂಡ ಅ, ಈ,ಯೇ...
ಶಬ್ದದ ಭಾವರ್ಥಗಳು , ಹಸುರಿನ ಬೆಳೆಗಳು.
ಬೇರಿನ ಮಣ್ಣುಗಳು , ಸಾವಿರಾರು ಕಣ್ಣುಗಳು.
ರುಚಿಸುವ ಹಣ್ಣುಗಳು ,ಹಡೆಯುವ ಹೆಣ್ಣುಗಳು.
ಸರಿಸಾಮನ ಕಂಡ ಅ,ಈ,ಯೇ...
ಧರ್ಮದ ಗ್ರಂಥಗಳು , ದಾಸರ ಧ್ವನಿಗಳು.
ವಾದ್ಯದ ಸ್ವರಗಳು ,ಹಾಡಿನ ಪದಗಳು.
ಸಂತರ ಧ್ಯಾನಗಳು,
ಭಕ್ತಿಯ ಭಾವನೆಗಳು, ಸಾಗುವ ದಾರಿಗಳು.
ಎಲ್ಲದರಲ್ಲೂ ಸರಿಸಾಮನ ಕಂಡ ಅ,ಈ,ಯೇ.
ಗೂಡಿನ ಮಾಡುಗಳು, ಗಾಡಿಯ ಚಕ್ರಗಳು.
ಬೆಂಕಿಯ ಜ್ವಾಲೆಗಳು, ಅಕ್ಕಿಯ ಆಗಳುಗಳು.
ಗಂಧದ ಸುವಾಸನೆಗಳು , ಚಂದದ ನವಿಲುಗಳು.
ಎಲ್ಲದರಲ್ಲೂ ಸರಿಸಮಾನ ಕಂಡ ಅ,ಈ,ಯೇ
ಅಲ್ಲಾ,ಈಶ್ವರ,ಯೇಸುಗೆ
ಇನ್ನಿಲ್ಲದ ನಯವಂಚನೆಗಳು,
ಸರಿದಾರಿ ಹರಿದಾರಿ ಒಂದೇ ಗೋಳ.
ಯಾಕೆ? ವರ್ಣಗಳ ಗೋಳು.
ಸರಿಸಿ ಏರಿಸಿ ಒಂದೆಂದು ಒಲವಿಗೆ.....
--- ಈಶ,ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
13 Sep 2015, 03:54 am
Download App from Playstore: